ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ದ್ವಿತೀಯ ಪಿ ಯು ಸಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ
ಹುದ್ದೆಗಳು: ಅರಣ್ಯ ಪಾಲಕ(Forest Guard)
ವಯಸ್ಸಿನ ಮಿತಿ :
ಕನಿಷ್ಠ: 18
ಗರಿಷ್ಠ: 27(ಸಾಮಾನ್ಯ ಅಭ್ಯರ್ಥಿ)
30(ಒಬಿಸಿ)
32(ಎಸ್ ಸಿ/ಎಸ್ ಟಿ)
ದೈಹಿಕ ಸದೃಢತೆ
ಎತ್ತರ: 163cm(ಪುರುಷ ಅಭ್ಯರ್ಥಿ)
150cm(ಮಹಿಳಾ ಅಭ್ಯರ್ಥಿ)
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು:
ಫೋಟೋ, ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ನೇಮಕಾತಿ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಸದೃಢತೆ,ವೈದ್ಯಕೀಯ ಪರೀಕ್ಷೆ
ವಿಭಾಗವಾರು ಲಭ್ಯವಿರುವ ಹುದ್ದೆಗಳ ಸಂಖ್ಯೆ
ಮಂಗಳೂರು-62, ಕೊಡಗು -26 ಚಿಕ್ಕಮಗಳೂರು- 52, ಹಾಸನ-18, ಕೆನರಾ- 33, ಮೈಸೂರು -47,ಶಿವಮೊಗ್ಗ- 66
ಬೆಂಗಳೂರು- 49, ಬೆಳಗಾವಿ- 12, ಬಳ್ಳಾರಿ- 29, ಚಾಮರಾಜನಗರ- 83,ಧಾರವಾಡ -5,ಕಲಬುರಗಿ- 58
ನಿಗದಿತ ಅರ್ಜಿ ಶುಲ್ಕದ ವಿವರ :
ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ
- ಪುರುಷ ಅಭ್ಯರ್ಥಿಗಳು – ರೂ. 220
- ಮಹಿಳಾ/ ತೃತೀಯ ಲಿಂಗ ಅಭ್ಯರ್ಥಿಗಳು – ರೂ. 120
ಪ.ಜಾತಿ, ಪ.ಪಂ, ಪ್ರವರ್ಗ 1 - ಪುರುಷ ಅಭ್ಯರ್ಥಿಗಳು – ರೂ. 120
- ಮಹಿಳಾ/ ತೃತೀಯ ಲಿಂಗ ಅಭ್ಯರ್ಥಿಗಳು – ರೂ. 70
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಚಲನ್ ಮೂಲಕ ಇ-ಪಾವತಿ ಸೌಲಭ್ಯವಿರುವ ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಬೇಕು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಡಿಸೆಂಬರ್ 01, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2023
ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜನವರಿ 05, 2024
ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 23,500 ರಿಂದ ರೂ. 47,650 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.