ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್ ಕಂಪನಿಯು ಬಿಡುಗಡೆ ಮಾಡಿರುವ ಐಫೋನ್ 10ಆರ್ ಸ್ಮಾರ್ಟ್ಫೋನ್ ಬೆಲೆ ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಐಫೋನ್ 10ಆರ್ 64 ಜಿಬಿ ಬೆಲೆಯನ್ನು ₹ 17,900 ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಷ್ಬ್ಯಾಕ್ ಸಹ ಸಿಗಲಿದೆ. ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ.
ಆ್ಯಪಲ್ ಕಂಪನಿಯ ಭಾರತದ ಜಾಲತಾಣದಲ್ಲಿ ಯಾವುದೇ ಬೆಲೆಗಳು ಬದಲಾವಣೆಯಾಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಗ್ರಾಹಕರು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ₹69,999 ಬೆಲೆ ಇವೆ.