ಭಾರತದಲ್ಲಿ ಆ್ಯಪಲ್ ಐಫೋನ್ 10ಆರ್ ಬೆಲೆ ಇಳಿಕೆ
ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್ ಕಂಪನಿಯು ಬಿಡುಗಡೆ ಮಾಡಿರುವ ಐಫೋನ್ 10ಆರ್ ಸ್ಮಾರ್ಟ್‌ಫೋನ್ ಬೆಲೆ ಕಡಿಮೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಐಫೋನ್ 10ಆರ್ 64 ಜಿಬಿ ಬೆಲೆಯನ್ನು ₹ 17,900 ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಷ್‌ಬ್ಯಾಕ್ ಸಹ ಸಿಗಲಿದೆ. ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ. ಆ್ಯಪಲ್ ಕಂಪನಿಯ ಭಾರತದ ಜಾಲತಾಣದಲ್ಲಿ ಯಾವುದೇ ಬೆಲೆಗಳು ಬದಲಾವಣೆಯಾಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು […]
ಬಾಲೆ ಮುಡಿದ ದಾಸವಾಳ: ಗುರುಗಣೇಶ್ ಕ್ಲಿಕ್ಕಿಸಿದ ಚಿತ್ರ
ಯಲ್ಲಾಪುರದ ಡಬ್ಗುಳಿ, ಗುರುಗಣೇಶ್ ಭಟ್ ಅವರ ಹುಟ್ಟೂರು, ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಆಗಾಗ ಚಂದ ಚಂದದ ಕತೆ ಹೇಳುವ ಚಿತ್ರಗಳನ್ನು ಕ್ಲಿಕ್ಕಿಸುವುದು, ಕ್ಲಿಕ್ಕಿಸಲೆಂದೇ ಕಾಡು, ಊರು ಸುತ್ತೋದು ಇವರ ಪ್ರೀತಿಯ ಹವ್ಯಾಸ. ಗ್ರಾಮೀಣ ಭಾಗದ ಕಾಡುಗಳಲ್ಲಿನ ಜನರ ಮುಗ್ದತೆ ಇವರ ಚಿತ್ರದ ಹಿಂದಿರುವ ದೊಡ್ಡ ಶಕ್ತಿ.
ಎ.7 :ನಮ್ಮ ಬಿರುವೆರ್ ಹಿರಿಯಡಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
ಹಿರಿಯಡಕ: ನಮ್ಮ ಬಿರುವೆರ್ ಹಿರಿಯಡಕ ಇದರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಎ.7 ರಂದು ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಲಿದೆ. ಬೆಳ್ಳಿಗೆ 9 ಗಂಟೆಗೆ ಗರಡಿ ಪೂಜೆ, 9:30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11:30ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಗಾನ ವೈಭವ ನಡೆಯಲಿದೆ. ಮಧ್ಯಾಹ್ನ ಗಂಟೆ 1ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮಾಳ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ
ಉಡುಪಿ: ಲೋಕಸಭಾ ಚುನಾವಣೆಯ ಪ್ರಯುಕ್ತ ಕಾರ್ಕಳ ತಾಲೂಕಿನ ಮಾಳ ದಲ್ಲಿ ತೆರೆದಿರುವ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಏ. 5 ರಾತ್ರಿ ದಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಪಿ ನಿಶಾ ಜೇಮ್ಸ್, ಕಾರ್ಕಳ ಸಹಾಯಕ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೋದಿಯಿಂದ ದೇಶ ಉದ್ದಾರವಾಗಿದೆ:ಶೋಭಾಕರಂದ್ಲಾಜೆ
ಉಡುಪಿ: ಮೋದಿ ಅವರಿಂದ ದೇಶ ಉದ್ದಾರವಾಗಿದೆ. ದೇಶದ ರಕ್ಷಣೆಗೆ ಒತ್ತುನೀಡಿದ್ದು, ಭಯೋತ್ಪಾದಕರನ್ನು ಮಟ್ಟಹಾಕಲಾಗುತ್ತಿದೆ. ಹಾಗಾಗಿ, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತಹಾಕಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಕೊಂಡಕೂರು ವಾರ್ಡ್‌ನಲ್ಲಿ ಕಾರ್ಯಕರ್ತರ ಸಭೆ ಹಾಗೂ ಚಾಯ್‌ಪೇ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಡುಪಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದರು. […]