ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಸಮಾವೇಶ ‘ಸಿರಿ’ ಉದ್ಘಾಟನೆ, ಸಂಘಟನೆಯಿಂದ ಹೋರಾಟದ ಗುಣ: ಸೊರಕೆ

ಉಡುಪಿ: ವಿದ್ಯಾರ್ಥಿಗಳು ಸಂಘಟನೆಯ ಮೂಲಕ ಹೋರಾಟದ ಗುಣ ಬೆಳೆಯಲು ಸಾಧ್ಯವಾಗುತ್ತದೆ. ಜತೆಗೆ ಎನ್.ಎಸ್. ಯು.ಐ. ನಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವದ ಗುಣ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಅವರು ಬಾರ್ಕೂರಿನ ಸಂಕಮ್ಮ ತಾಯಿ ಸಭಾಂಗಣದಲ್ಲಿ ನ್ಯಾಷನಲ್ ಸ್ಟೂಡೆಂಟ್ ಯುನಿಯನ್ ಆಫ್ ಇಂಡಿಯಾ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾವೇಶ ಸಿರಿ-2019 ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅದನ್ನು ಯಾವುದೇ ಸರಕಾರಗಳು ಕೂಡ ಕಡೆಗಣಿಸುವಂತಿಲ್ಲ. ವಿದ್ಯಾರ್ಥಿ ಶಕ್ತಿ ಒಂದು ಸರ್ಕಾರವನ್ನು ಉಳಿಸಲು ಅಥವಾ ಅಳಿಸಲು ಕೂಡ ಶಕ್ತವಾಗುತ್ತದೆ ಎಂದರು.
ಜಿಲ್ಲಾ ಎನ್.ಎಸ್. ಯು.ಐ. ಅಧ್ಯಕ್ಷ ಕ್ರಿಸ್ಟನ್ ಡಿ’ ಅಲ್ಮೇಡಾ ಅಧ್ಯಕ್ಷತೆವಹಿಸಿದ್ದರು. ನಿಖಿಲ್ ರಾಜ್ ಮೌರ್ಯಾ ದಿಕ್ಸೂಚಿ ಭಾಷಣ ಮಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಕುಂದಾಪುರ ವಿಧಾನಸಭಾ ಕ್ಷೇತ್ರದ ಎನ್.ಎಸ್. ಯು.ಐ. ಅಧ್ಯಕ್ಷ ರವೀಂದ್ರ ಕಾಂಚನ್, ಬಾರ್ಕೂರು ಘಟಕದ ಅಧ್ಯಕ್ಷ ದಿವಾಕರ ಕುಲಾಲ್, ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಶಂಕರ ಕುಂದರ್, ಇಚ್ಚಿತಾರ್ಥ್ ಶೆಟ್ಟಿ, ಯತೀಶ್ ಕರ್ಕೇರಾ, ಕಿಶನ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.