ಕೊಡವೂರು: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಕೆ.ನಾರಾಯಣ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಅವರು, ಸಂಘದ 2020-21 ನೇ ಸಾಲಿನ ವರದಿಯನ್ನು ಮಂಡಿಸಿದರು.
ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಮಾತನಾಡಿ, ಪ್ರಸ್ತಕ ಆರ್ಥಿಕ ವರ್ಷದಲ್ಲಿ ಸಂಘವು ಎ ಗ್ರೇಡ್ ಅಡಿಟ್ ವರ್ಗೀಕರಣವನ್ನು ಪಡೆದಿದ್ದು, 2020-21ನೇ ಸಾಲಿನಲ್ಲಿ ಒಟ್ಟು 31.77 ಕೋಟಿ ರೂ. ಸಾಲವನ್ನು ವಿತರಿಸಿ, 2020-21 ಕ್ಕೆ 44.92 ಕೋಟಿ ರೂ. ಸಾಲದ ಹೊರಬಾಕಿಯನ್ನು ಹೊಂದಲಾಗಿದೆ. 85.59 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 2020-21 ರಲ್ಲಿ ಶೇ. 16 ಡಿವಿಡೆಂಡ್‌ನ್ನು ಘೋಷಿಸಲಾಗಿದೆ. ತ್ವರಿತ ಸೇವೆಯ ಮೂಲಕ ಸದಸ್ಯರ ಹಾಗೂ ಗ್ರಾಹಕರ ಅಶೋತ್ತರಗಳಿಗೆ ಸಂಘ ಸ್ಪಂದಿಸುತ್ತಿದೆ ಎಂದರು.
2020-21ನೇ ಸಾಲಿನಲ್ಲಿ ಸಂಘದ ಎಲ್ಲಾ ಎ ವರ್ಗದ ಸದಸ್ಯರಿಗೆ ₹ 50 ಸಾವಿರ ಅಪಘಾತ ಪರಿಹಾರ ಯೋಜನೆಯ ಬಗ್ಗೆ ಜನತಾ ಅಪಘಾತ ವಿಮೆಯನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಬಿ. ದಿನೇಶ್ ಪೈ, ಕೆ. ಕಾಳು ಸೇರಿಗಾರ ಕೊಡವೂರು, ಮನೋಜ್ ಎಸ್. ಕರ್ಕೇರ, ನವೀನ್ ಶೆಟ್ಟಿ ಮೂಡುಬೆಟ್ಟು, ರತ್ನಾಕರ ಅಮೀನ್, ಎನ್. ಭೋಜ, ಸತೀಶ್ ನಾಯ್ಕ, ಕುಸುಮಾ ಜಿ. ಪ್ರಭು, ಬಬಿತ ಉಪಸ್ಥಿತರಿದ್ದರು. ನಿರ್ದೇಶಕ ಮನೋಜ್ ಎಸ್ ಕರ್ಕೇರ ವಂದಿಸಿದರು.