ಉಡುಪಿ: ಅಬ್ಬಗ-ದಾರಗ, ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶನಿವಾರ ದೈವಗಳ ದಿವ್ಯ ಸನ್ನಿಧಿಯಾದ ವೀರಭದ್ರ ಸಪರಿವಾರ, ಶನೈಶ್ವರ ಹಾಗೂ ನಾಗ ಸನ್ನಿಧಿಯಲ್ಲಿವಾರ್ಷಿಕ ವರ್ಧಂತಿ ಮಹೋತ್ಸವದ ದೇವರಿಗೆ ಕಲಶಾಭಿಷೇಕ, ಗಣ ಯಾಗ, ಸಾನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ರಂಗ ಪೂಜೆ ಮುಂತಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ್ ಗುರು ತಂತ್ರಿ ಮಾರ್ಗದರ್ಶನದಲ್ಲಿ ಅರ್ಚಕರು ನಡೆಸಿಕೊಟ್ಟರು.
ಈ ಸಂದರ್ಭ ಟ್ರಸ್ಟಿನ ಅಧ್ಯಕ್ಷರು, ವಿಶ್ವಸ್ಥ ಮಂಡಳಿಯ ಸದಸ್ಯರು, ನೂರಾರು ಭಕ್ತರೂ ಉಪಸ್ಥಿತರಿದ್ದರು. ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.