ಕಾರ್ಕಳ: ಇಲ್ಲಿನ ಆನೆಕೆರೆ ಸರ್ಕಲ್ (ಕನಕಾಬಾರ್)ಎದುರಿಗಿರುವ ಆಲದ ಮರವೊಂದು ಸೋಮವಾರ ಮುಂಜಾನೆ ಸುಮಾರು 6.30 ವೇಳೆಗೆ ಬೀಸಿದ ಮಳೆ-ಗಾಳಿಗೆ ಧರೆಗುರುಳಿದೆ. ಮುಂಜಾನೆ ಈ ರಸ್ತೆಯಲ್ಲಿ ಜನಸಂಚಾರ ವಿರಳವಿದ್ದುದರಿಂದ ಯಾವುದೇ ಅಪಾಯಗಳಾಗಿಲ್ಲ.ರಸ್ತೆಯ ನಡುವೆಯೇ ಮರ ಬಿದ್ದಿರುವುದರಿಂದ ಅಕ್ಕ ಪಕ್ಕದಲ್ಲಿರುವ ಅಂಗಡಿಗಳ ಮೇಲೆ ಮರ ಬಿದ್ದು ಅಪಾಯವಾಗುವುದು ತಪ್ಪಿದೆ. ಸ್ಥಳಕ್ಕೆ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಮರದ ತೆರವು ಕಾರ್ಯಕ್ಕೆ ಮುಂದಾದರು.