ಉಡುಪಿ: ಉಡುಪಿ ಗ್ರಾಮೀಣ ಭಂಟರ ಸಂಘ/ ಟ್ರಸ್ಟ್ ನ ವತಿಯಿಂದ ನಡೆದ ಮಹಿಳೆಯರಿಗಾಗಿ ಒಂದು ದಿನದ ಉದ್ಯಮಶೀಲತ ಪ್ರೇರಣಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಸಂಘದ ವತಿಯಿಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಅಭಿನಂದಿಸಿದರು. ಟ್ರಸ್ಟನ ಅಧ್ಯಕ್ಷ ಅಶೋಕ್ ಶೆಟ್ಟಿ, ಸಂಘದ ಅಧ್ಯಕ್ಷ ಸಖರಾಮ ಶೆಟ್ಟಿ, ಹಿರಿಯರಾದ ಡಾ. ಎಚ್.ಬಿ. ಶೆಟ್ಟಿ, ಡಾ. ರವಿರಾಜ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ, ಸಂಪನ್ಮೂಲ ಮಹಿಳೆ ಪ್ರೊ. ದಿವ್ಯರಾಣಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.