ನಾನು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯಾಗಿದ್ದೆ.ಅದೇ ಎಂಬಿಎ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಸೇೂಮೇಶ್ವರ ಅಧ್ಯಕ್ಷ.ನಾನು ಮೆಾದಲಿನಿಂದಲು ಈ ಮುಷ್ಕರ ಈ ಪ್ರತಿಭಟನೆ ಧರಣಿಗಳಿಂದ ಸ್ವಲ್ಪ ದೂರ ನಿಲ್ಲುವ ಜಾಯಮಾನದ ವ್ಯಕ್ತಿ.ಆದರೆ ನಮ್ಮ ಅಧ್ಯಕ್ಷ ಸೇೂಮೇಶ್ವರ ಈ ಎಲ್ಲದರಲ್ಲೂ ಸ್ವಲ್ಪ ಮುಂದೆ.ಅಂತು ನಮ್ಮ ಅಧ್ಯಕ್ಷರು ಒಂದು ವಿಷಯ ಹಿಡಿದುಕೊಂಡು ವಿದ್ಯಾರ್ಥಿ ಮುಷ್ಕರಕ್ಕೆ ಕರೆಕೊಟ್ಟರು.ಮುಷ್ಕರ ಯಾಕಾಗಿ ಅನ್ನುವುದನ್ನು ಮುಂದೆ ಹೇಳುತ್ತೇನೆ.ಈಗಲೇ ಹೇಳಿ ಬಿಟ್ಟರೆ ನೀವು ನಕ್ಕು ಬಿಡ ಬಹುದು.
*ಒಂದು ಕ್ಲುಲಕ ಕಾರಣಕ್ಕಾಗಿಯೇ ಮುಷ್ಕರ ನಡೆದಿದ್ದು ಎಷ್ಟು ದಿನ ಕೇಳಿದರೆ ನಿಮಗೆ ಎದೆ ಝಲ ಎನ್ನ ಬಹುದು.ಅದರಲ್ಲೂ ಬರೇ ಸ್ನಾತಕೋತ್ತರ ಅಧ್ಯಯನಕ್ಕಾಗಿಯೇ ಬೇರೆ ಬೇರೆ ಪ್ರದೇಶಗಳಿಂದ ವಿದ್ಯಾರ್ಥಿಗಳನ್ನು ವಿವಿಯ ಆವರಣದಲ್ಲಿ ಮುಷ್ಕರದ ನೆಪದಲ್ಲಿ ಕಟ್ಟಿ ಹಾಕುವುದು ಸುಲಭದ ಕೆಲಸವಾಗಿರಲಿಲ್ಲ.ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳ ಭವಿಷ್ಯ ಅಡಗಿರುವುದು ಪ್ರೊಫೆಸರ್ಸಗಳ ಕೈಯೊಳಗೆ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಮುಷ್ಕರಕ್ಕೆ ಎಳೆದು ತರುವುದು ಸುಲಭವಾಗಿರಲಿಲ್ಲ.
*ಆದರೂ ನಾವು ನಡೆಸಿದ ಘನ ಕಾರ್ಯದ ಮುಷ್ಕರ ಎಷ್ಟು ದಿನಗೊತ್ತಾ32 ದಿನಗಳು.ಇದು ಕೆಟ್ಟದೊ ಒಳ್ಳೆಯದೊ ಗೊತ್ತಿಲ್ಲ ಆದರೂ ಇಂದಿಗೂ ನಮ್ಮ ವಿ.ವಿ.ಇತಿಹಾಸದಲ್ಲೇ ಯಾರುಮುರಿಯಲಾರದ ಹೊಸದೊಂದು ದಾಖಲೆ ಎಂದೇ ಹೇಳ ಬಹುದು.
*ಮುಷ್ಕರದಲ್ಲಿನ ಪ್ರಮುಖ ಬೇಡಿಕೆ ಏನು ಗೊತ್ತಾ? ನಮಗೆ ಪಠ್ಯೇತರ ಚಟುವಟಿಕೆಗಳ ಸಂಘ ಬೇಡ ವಿದ್ಯಾರ್ಥಿ ಸಂಘ ಬೇಕು.ಇಷ್ಟೇ ನಮ್ಮ ಬೇಡಿಕೆ.ಈ ಬೇಡಿಕೆಯನ್ನು ಒಪ್ಪಲು ಅಂದಿನ ಕುಲಪತಿಗಳಾದ ಪ್ರೊ.ಶೇಕ್ ಆಲಿಯವರು ಸಿದ್ಧರಿಲ್ಲ.ಆದರೂ ನಾವು ನಮ್ಮ ಬೇಡಿಕೆ ಸಡಿಸಲೇ ಇಲ್ಲ;ಈ ಸಂದರ್ಭದಲ್ಲಿ ನಮ್ಮೆಲ್ಲರನ್ನು ಮಂಗಳೂರು ನಗರ ಪೊಲೀಸ್ ಠಾಣೆಯವರು ಬಂಧಿಸಿ ಕೊಂಡು ಹೇೂಗಿ ನಮ್ಮ ಹೆಸರು ಕೇಳಿ ಪಡೆದುಕೊಂಡು ಗದರಿದ್ದು ನೆನಪಿದೆ. ಈ ಸಂದರ್ಭದಲ್ಲಿ ನಮ್ಮ ಹುಡುಗಾಟದ ಬುದ್ಧಿ ನೇೂಡಿ;ನಾವು ಯಾವ ವಿದ್ಯಾರ್ಥಿಗಳು ಮುಷ್ಕರಕ್ಕೆ ಬರಲಿಲ್ಲ ಅವರ ಹೆಸರನ್ನು ಠಾಣೆಯಲ್ಲಿ ನಮೂ
ದಿಸಿ ಬಂದಿದ್ದು ಎಣಿಸಿದರೆ ಇಂದಿಗೂ ನಗು ಬರುತ್ತದೆ.
*.ಈ ನಮ್ಮ ಸುದೀರ್ಘ ಕಾಲದ ಧರಣಿಯ ಸುದ್ದಿ ಅಂದಿನ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆ ಅವರ ಕಿವಿಗೂ ಬಿತ್ತು.ಅವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ನಾವು ಮುಷ್ಕರ ನಡೆಸುತ್ತಿದ್ದ ಕೊಣಾಜೆಗು ಬಂದು ಬಿಟ್ಟರು.
ಅವರು ಈ ಸಂದರ್ಭದಲ್ಲಿ ನಮಗೆ ಹೇಳಿದ ಮಾತು ಇನ್ನೂ ನನಗೆ ನೆನಪಿದೆ.” ವಿದ್ಯಾರ್ಥಿಗಳು ಮುಷ್ಕರ ಮಾಡ ಬಾರದು ಅನ್ನುವ ವ್ಯಕ್ತಿಗಳಲ್ಲಿ ನಾನುಕೊನೆಯ ಮನುಷ್ಯ ಆದರೆ ಮುಷ್ಕರ ಮಾಡುವ ಕಾರಣಕ್ಕೊಂದು ತೂಕ ಬೇಕು ಘನತೆ ಬೇಕು..”ವಿ.ಸಿ.ಯವರನ್ನು ಅಲ್ಲಿಯೇ ಕರೆದು ವಿದ್ಯಾರ್ಥಿಗಳಿಗೆ ಹೇಗೂ ಬುದ್ಧಿ ಕಡಿಮೆ ಇದೆ.ನಿಮಗೂ ಕಡಿಮವಯಾಗ ಬಾರದು..ತಕ್ಷಣವೇ ಇವರ ಬೇಡಿಕೆ ಈಡೇರಿಸಲು ಸೂಚನೆ ನೀಡಿದರು.
*ಅಂದು ನಾವು ಮಾಡಿದ ಮುಷ್ಕರ ಎಣಿಸಿ ಕೊಂಡರೆ ಇಂದಿಗೂ ನಗು ಬರುತ್ತದೆ.ಅದು ಅಂದಿನ ವಿದ್ಯಾರ್ಥಿಗಳ ಮುಗ್ಧ ಮನಸ್ಸಿನ ಹೇೂರಾಟ.ಅದರಲ್ಲಿ ಯಾವುದೇ ರಾಜಕೀಯವಾಗಲಿ ಜಾತಿಯಾಗಲಿ ಧಮ೯ದ ಲೇಪನವಾಗಲಿ ಇರಲೇ ಇಲ್ಲ ಅನ್ನುವುದು ನಮಗೆನೀಡಿದ ಸಂತೃಪ್ತಿಯ ಅನುಭವ.















