ಕಾಂಗ್ರೆಸ್ ಬಲವರ್ಧನೆಗೆ ಎಸ್‌ಎಸ್‌ಎ ಅಭಿಯಾನ: ಹಿಮ್ಮತ್‌ಸಿಂಗ್

ಉಡುಪಿ: ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಸಂಘಟನಾ ಸೃಜನಾ ಅಭಿಯಾನ (ಎಸ್‌ಎಸ್‌ಎ) ಆರಂಭಿಸಲಾಗಿದ್ದು, ಅದರ ಭಾಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಜಿಲ್ಲೆಯ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಎಐಸಿಸಿ ವೀಕ್ಷಕ ಹಿಮ್ಮತ್‌ಸಿಂಗ್ ಪ್ರಹ್ಲಾದ್‌ಸಿಂಗ್ ಪಟೇಲ್ ತಿಳಿಸಿದರು. ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ನಡೆದ ಎಐಸಿಸಿ ಸಭೆಯ ತೀರ್ಮಾನದಂತೆ ದೇಶವ್ಯಾಪಿ ಪಕ್ಷ ಸಂಘಟನೆಯನ್ನು ಬಲಪಡಿಸಲು ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಜಿಲ್ಲೆಯ […]
ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ

ಉಡುಪಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಶನಿವಾರ ಕಾಂಗ್ರೆಸ್ ಭವನದಲ್ಲಿ ವಿಜಯೋತ್ಸವ ಆಚರಿಸಿತು. ಕಾಂಗ್ರೆಸ್ ಭವನದ ಎದುರು ಸೇರಿದ್ದ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, “ಸುಮಾರು 12 ವರ್ಷಗಳ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಒಬ್ಬ ಸಚಿವರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಹತ್ವದ ಬೆಳವಣಿಗೆ. […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಯೋಜನೆಗೆ ಕೆಎಸ್‍ಸಿಎಸ್‍ಟಿ ವತಿಯಿಂದ ಅತ್ತ್ಯುತ್ತಮ ಯೋಜನಾ ಪ್ರಶಸ್ತಿ

ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಬಿ ಜಿ ಎಸ್ ಮಹಾ ವಿದ್ಯಾಲಯ, ಮಂಡ್ಯ ಇಲ್ಲಿ ದಿನಾಂಕ 17 ಮತ್ತು 18 ರಂದು 48ನೇ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಪೋಸ್ಟರ್ ಪ್ರದರ್ಶನ ಮತ್ತು ಯೋಜನಾ ಪ್ರದರ್ಶನ ಸ್ಪರ್ಧೆಯಲ್ಲಿ ಎ ಐ ಆಧಾರಿತ ಶ್ರವಣ ಸಾಧನ “ಹಿಯರ್ ಪ್ಯೂಶನ್” ಎಂಬ ಯೋಜನೆಗೆ ವರ್ಷದ ಅತ್ಯುತ್ತಮ ಯೋಜನಾ ಪ್ರಶಸ್ತಿಯನ್ನು […]
ಜುಲೈ 27ರಿಂದ ಆಗಸ್ಟ್ 1ರವರೆಗೆ ಮಣಿಪಾಲದಲ್ಲಿ ಯಕೃತ್ತಿನ ಆರೋಗ್ಯ ಜಾಗೃತಿ ಶಿಬಿರ

ಮಣಿಪಾಲ: ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಜುಲೈ 27ರಿಂದ ಆಗಸ್ಟ್ 1ರವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಯಕೃತ್ತಿನ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಹೆಪಟೈಟಿಸ್, ಕಾಮಾಲೆ, ಲಿವರ್ ಸಿರೋಸಿಸ್, ಯಕೃತ್ತಿನ ಹಿಗ್ಗುವಿಕೆ ಹಾಗೂ ಮದ್ಯಪಾನದಿಂದ ಉಂಟಾಗುವ ಯಕೃತ್ತಿನ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಉಚಿತ ವೈದ್ಯಕೀಯ, ಆಹಾರ ಹಾಗೂ ಯೋಗ ಸಲಹೆ ನೀಡಲಾಗುವುದು. ಮದ್ಯಪಾನ ವ್ಯಸನಿಗಳಿಗೆ ವಿಶೇಷ ಸಮಾಲೋಚನೆಯೂ ಇರಲಿದೆ. ಶಿಬಿರದ ಅಂಗವಾಗಿ ಪಂಚಕರ್ಮ, ಪ್ರಯೋಗಾಲಯ ಪರೀಕ್ಷೆಗಳು, […]
ಉಡುಪಿ ಕೃಷ್ಣ ಮಠದಲ್ಲಿ ತಪ್ತಮುಧ್ರಾಧಾರಣೆ

ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ ಮುದ್ರಾಧಾರಣೆ ಭಕ್ತಿ ಶ್ರದ್ಧೆಯಿಂದ ನೆರವೇರಿತು. ಶ್ರೀ ಕಾಣಿಯೂರು ಮಠ ಹಾಗೂ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ತಪ್ತ ಮುದ್ರಾಧಾರಣೆ ಸ್ವೀಕರಿಸಿದರು. ಉಡುಪಿ ನಗರದ ಶ್ರೀ ಕಾಣಿಯೂರು ಮಠದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ತಪ್ತ ಮುದ್ರಾಧಾರಣೆಯು ವೈದಿಕ ಸಂಪ್ರದಾಯದಂತೆ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಸುದರ್ಶನ ಹೋಮ, ವಿಶೇಷ ಪೂಜೆ, ಆರತಿ ಹಾಗೂ ಪೂರ್ಣಾಹುತಿ ವಿಧಿವಿಧಾನಗಳನ್ನು […]