ಕೊರೊನಾ ವಿರುದ್ಧ ಹೋರಾಡಲು ಬಂದೇಬಿಡ್ತು ಪರಿಣಾಮಕಾರಿ‌ ಚಿಕಿತ್ಸಾ ವಿಧಾನ: ಇದು ಲಸಿಕೆನೂ ಅಲ್ಲ, ಮಾತ್ರೆನೂ ಅಲ್ಲ.!

ಉಡುಪಿ: ಕೊರೊನಾ ಮಹಾಮಾರಿಗೆ ಈವರೆಗೂ ಸೂಕ್ತ ಹಾಗೂ ನಿಖರವಾದ ಚಿಕಿತ್ಸೆ ವಿಧಾನ ಬಂದಿಲ್ಲ. ಒಂದಿಷ್ಟು ಮೆಡಿಸಿನ್ ಕಾಂಬಿನೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆ, ಚಿಕಿತ್ಸಾ ವಿಧಾನ ಮತ್ತು ಪ್ರತ್ಯೇಕ ಮೆಡಿಸಿನ್ ಬಗ್ಗೆ ಸಂಶೋಧನೆಗಳು ಮುಂದುವರಿದಿವೆ. ಈ ಮಧ್ಯೆ ಇದೀಗ ಮತ್ತೊಂದು ರೀತಿಯ ಸುಲಭ ಮತ್ತು ಅಷ್ಟೇ ಪರಿಣಾಮಕಾರಿ ಚಿಕಿತ್ಸಾ ವಿಧಾನದ ಬಂದಿದೆ.

ಹೌದು, ಲೋ ರೇಡಿಯೇಷನ್ ಥೆರಪಿ (ಲಘು ವಿಕಿರಣ ಚಿಕಿತ್ಸೆ). ಸೋಂಕು ಉಲ್ಭಣಿಸಿ ಶ್ವಾಸಕೋಶದ ಸಮಸ್ಯೆ ಎದುರಿಸ್ತಾ ಇರುವವರಿಗೆ ಈ ಚಿಕಿತ್ಸೆ ನೀಡಿದರೆ, ಇದು ವೈರಸ್ ಅನ್ನು ನಾಶ ಮಾಡಿ ಆದಷ್ಟು ಬೇಗ ರೋಗಿ ಚೇತರಿಸಿಕೊಳ್ಳುವಂತಾಗುತ್ತದೆ. ಇದರಿಂದ ಎರಡು ಮೂರು ದಿನಗಳಲ್ಲೇ ರೋಗಿ ಚೇತರಿಸಿಕೊಂಡು ನಾರ್ಮಲ್ ಟ್ರೀಟ್ ಮೆಂಟ್ ಗೆ ಸರಿ ಹೋಗುತ್ತಾನೆ.

ಕೊರೊನಾ ರೋಗಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಇದ್ರೆ, ರೋಗ ಉಲ್ಭಣಿಸಬಹುದು. ಈ ವೇಳೆ ಶ್ವಾಸಕೋಶಕ್ಕೆ ಕೊರೊನಾ ತೀವ್ರತೆರನಾದ ಹಾನಿ ಉಂಟು ಮಾಡಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಸಹಜವಾಗಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲೇಬೇಕಾಗುತ್ತದೆ. ಒಮ್ಮೆ ವೆಂಟಿಲೇಟರ್ ಗೆ ಹೋದ್ರೆ ಕನಿಷ್ಠ ಒಂದು ವಾರ ಅಲ್ಲೇ ಚಿಕಿತ್ಸೆ ಕೊಡಬೇಕಾಗುತ್ತದೆ. ಕೇಸ್ ಗಂಭೀರವಾಗಿದ್ದರೆ 7 ರಿಂದ 14 ದಿನಗಳ ಕಾಲ ಚಿಕಿತ್ಸೆ ಅನಿವಾರ್ಯವಾಗುತ್ತದೆ. ಆದರೆ ಈ ಲಘು ವಿಕಿರಣ ಚಿಕಿತ್ಸಾ ವಿಧಾನದಿಂದ ಈ ಆಕ್ಸಿಜನ್ ಅವಲಂಬನೆಯೂ ಕಡಿಮೆಯಾಗುತ್ತೆ. ರೋಗಿ ಚೇತರಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿದೆ.

ಲೋ ರೇಡಿಯೇಷನ್ ಥೆರಪಿಯ ವಿಧಾನ?:
ಸಾಮಾನ್ಯವಾಗಿ ಈ ಚಿಕಿತ್ಸಾ ವಿಧಾನವನ್ನು ಅನುಸರಿಸುವುದು ಕ್ಯಾನ್ಸರ್ ರೋಗಿಗಳಿಗೆ. ರೇಡಿಯೇಷನ್ ಥರಪಿ ಮೂಲಕ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲಾಗುತ್ತದೆ. ಆದರೆ,ಕ್ಯಾನ್ಸರ್ ರೋಗಿಗಳಿಗೆ ಲಘು ವಿಕಿರಣ ಚಿಕಿತ್ಸೆ ಸಾಕಾಗಲ್ಲ. ಹೀಗಾಗಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು 60ರಿಂದ 70 ಗ್ರೇಯ್ ನಷ್ಟು ವಿಕಿರಣ ಹಾಯಿಸಲಾಗುತ್ತದೆ.

ಆದರೆ, ಈ ಕೊರೊನಾ ರೋಗಿಗಳಿಗೆ ಇಷ್ಟೊಂದು ಪ್ರಮಾಣದ ವಿಕಿರಣ ಹಾಯಿಸುವ ಅಗತ್ಯತೆ ಇರೋದಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಕೆ ಮಾಡಲಾಗುತ್ತೆ. ಕೊರೊನಾಗೆ ಲಘು ವಿಕಿರಣ ಚಿಕಿತ್ಸೆ ಅಂದರೆ 0.5 ಗ್ರೇಯ್ ನಷ್ಟು ಮಾತ್ರ ವಿಕಿರಣವನ್ನು ದೇಹದ ಮೇಲೆ ಹಾಯಿಸಲಾಗುತ್ತದೆ. ಶ್ವಾಸಕೋಶದ ಮೇಲೆ ಈ ಪ್ರಯೋಗ ಮಾಡಿದಾಗ ಅಲ್ಲಿರುವ ಕೊರೊನಾ ವೈರಸ್ ನಾಶವಾಗುತ್ತದೆ. ವೈರಸ್ ನಾಶವಾದ ಬಳಿಕ ನಿಧಾನವಾಗಿ ಶ್ವಾಸಕೋಶದ ತೊಂದರೆಗಳು ಕೂಡ ಮಾಯವಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ.

ಇದು ಯಶಸ್ಸು ಕಂಡಿದೆಯೇ?.:
ದೇಶದ ಕೆಲವೇ ಕೆಲವು ಕಡೆ ಮಾತ್ರ ಇಂತದ್ದೊಂದು ಪ್ರಯೋಗ ನಡೆಸಲಾಗಿದೆ. ಈ ಥೆರಪಿ ಶೇಕಡಾ 90ರಷ್ಟು ಉತ್ತಮ ಫಲಿತಾಂಶ ನೀಡಿದೆ. ಮುಂದೆ ರಾಜ್ಯದಲ್ಲಿಯೂ ಕೆಲವು ಕಡೆ ಈ ಪ್ರಯೋಗ ನಡೆಸಲು ಅನುಮತಿ ಕೋರಲಾಗುತ್ತಿದೆ. ಬಹಳ ಗಂಭೀರವಾದ ರೋಗಿಗಳ ಮೇಲೆ ಇದನ್ನು ಪ್ರಯೋಗ ಮಾಡಿ ಇದರ ಪರಿಣಾಮಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಇದ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳಿಸಲಾಗುತ್ತದೆ. ಬಳಿಕ ಐಸಿಎಂಆರ್ ಅನುಮತಿ ನೀಡಿದ ಬಳಿಕ ಎಲ್ಲಾ ಕಡೆ ಈ ಚಿಕಿತ್ಸಾ ವಿಧಾನ ಅನುಸರಿಸಲು ಅವಕಾಶ ಸಿಗಬಹುದು.

ಹೆಚ್ಚು ಪರಿಣಾಮಕಾರಿ:
ಲೋ ರೇಡಿಯೇಷನ್ ಥೆರಪಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಬಹುದಾದ ಚಿಕಿತ್ಸಾ ವಿಧಾನ. ಕೇವಲ 10ರಿಂದ 15 ನಿಮಿಷಗಳ ಕಾಲ ಈ ಲೋ ರೇಡಿಯೇಷನ್ ಥೆರಪಿ ಮುಗಿದು ಹೋಗುತ್ತೆ. ಇದಕ್ಕೆ ತಜ್ಞ ವೈದ್ಯರ ಅಗತ್ಯತೆ ಇದ್ದೇ ಇರುತ್ತೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕೊರೊನಾ ಸೋಂಕಿತರಿಗೂ ಈ ಟ್ರೀಟ್ ಮೆಂಟ್ ಕೊಡಬೇಕಾಗುತ್ತದೆ. ಆದರೆ , ಈ ಥೆರಪಿ ಸಕ್ಸಸ್ ಆದ್ರೆ ತುಂಬಾ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಚಿಕಿತ್ಸೆ ಕೊಡಬಹುದಾಗಿದೆ. ಈ ಲೋ ರೆಡಿಯೇಷನ್ ಥೆರಪಿ ವ್ಯವಸ್ಥೆ ಮಾಡಿಕೊಂಡು ,ಅಥವಾ ಇದು ಲಭ್ಯವಿದ್ದಲ್ಲೇ ರೋಗಿಗಳನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಬಹುದು. ಇದರಿಂದ ಆಕ್ಸಿಜನ್ ಅವಲಂಬನೆಯೂ ತಪ್ಪಲಿದೆ. ರೋಗಿಯೂ ಬೇಗ ಗುಣಮುಖನಾಗುತ್ತಾನೆ. ಕೊರೊನಾದಿಂದಾಗಿ ರೋಗ ಉಲ್ಭಣಿಸಿದ್ರೂ ಪ್ರಾಣಕ್ಕೆ ಕುತ್ತು ಬರಲ್ಲ. ಒಂದು ಬಾರಿ ವೈರಾಣು ಕಂಟ್ರೋಲ್ ಆಗಿ ಬಿಟ್ಟರೆ ಬಳಿಕ ಕೊರೊನಾದಿಂದ ಮುಕ್ತರನ್ನಾಗಿಸೋದು ಸುಲಭ.

ಚಿಕಿತ್ಸೆಯ ವೆಚ್ಚ?.:
ಈ ಲಘು ವಿಕಿರಣ ಚಿಕಿತ್ಸೆಗೆ ಹೆಚ್ಚು ಹಣ ವ್ಯಯಿಸಬೇಕಾಗಿಲ್ಲ, ಅತ್ಯಂತ ಕಡಿಮೆ ವೆಚ್ಚದಲ್ಲೇ ಮಾಡಿ ಮುಗಿಸಬಹುದು. ಒಮ್ಮೆ ಲೋ ರೇಡಿಯಷನ್ ಥೆರಪಿಗೆ ಒಳಗಾದರೆ ನಂತರದ ಮೂರು ದಿನಗಳಲ್ಲೇ ಆಕ್ಸಿಜನ್ ಅವಲಂಬನೆಯಿಂದ ಹೊರಗೆ ಬರಬಹುದು. ಇದರಿಂದಾಗಿ ಮುಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು.