ಉಡುಪಿ XPRESS ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆ-2020 ಬಹುಮಾನ ಗೆದ್ದವರು ಇವರು!

ಉಡುಪಿ: ಕರಾವಳಿಯ ಜನಪ್ರಿಯ ಸುದ್ದಿ ಜಾಲತಾಣ ಉಡುಪಿ XPRESS, ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಅಮ್ಮ with ಕಂದಮ್ಮ  ಫೋಟೋ ಸ್ಪರ್ಧೆ 2020 ಸೀಸನ್ 2 ಇದರ ಫಲಿತಾಂಶ ಹೊರಬಿದ್ದಿದ್ದು ಫೇಸ್ಬುಕ್ ಲೈಕ್ ಆಧಾರಿತ ವಿಭಾಗದಲ್ಲಿ ಅಮ್ಮ-ಮಗಳಾದ  ಹರ್ಷಿತಾ, ಮಾನ್ವಿ, ಪಾವಂಜೆ  ಪ್ರಥಮ, ಹಿರೇಬೆಟ್ಟು ಉಡುಪಿಯ ಸುಷ್ಮಾ, ಶಯನ್ ದ್ವಿತೀಯ, ಹೊಸಪೇಟೆಯ ಹೇಮಾ ಕೆ, ಬೃಂದನ್ ಬಿ, ತೃತೀಯ ಬಹುಮಾನ ಪಡೆದಿದ್ದಾರೆ.

ತೀರ್ಪುಗಾರರ ಆಯ್ಕೆ ವಿಭಾಗ:

ಲೈಕ್ ಇಲ್ಲದೆಯೂ ತೀರ್ಪುಗಾರರು ಆಯ್ಕೆ ವಿಭಾಗದಲ್ಲಿ ಬ್ರಹ್ಮಾವರದ ಸಹನಾ ನಾಯಕ್, ಆಶ್ವಿ ಎಸ್, ಪ್ರಥಮ, ಉಡುಪಿಯ ಪ್ರಜ್ವಲೀ ಎಸ್ ಭಟ್,ಹಿರಣ್ಮಯೀ ಭಟ್ ದ್ವಿತೀಯ ಬಹುಮಾನ, ಕಾರ್ಕಳದ ನಿಶ್ಮಿತಾ ನಾಯಕ್, ಜಾನವ್ ನಾಯಕ್ ತೃತೀಯ ಬಹುಮಾನ ಪಡೆದಿದ್ದಾರೆ.

ಕರಾವಳಿಯ ಜನಪ್ರಿಯ ಸುದ್ದಿ ಜಾಲತಾಣ ಉಡುಪಿ XPRESS ಕಳೆದ ಸಲದಂತೆ ಈ ವರ್ಷವೂ “ಅಮ್ಮ with ಕಂದಮ್ಮ”  ಫೋಟೋ ಸ್ಪರ್ಧೆಗೆ ಫೇಸ್ಬುಕ್ ನಲ್ಲಿ ಫೋಟೋ ಫೋಸ್ಟ್ ಮಾಡಲು ತಿಳಿಸಿದಾಗ ನಮ್ಮ ಫೇಸ್ ಬುಕ್ ಪುಟದಲ್ಲಿ ಸುಮಾರು 400 ಕ್ಕೂ ಅಧಿಕ ಫೋಟೋಗಳು ಫೋಸ್ಟ್ ಆಗಿದ್ದವು.

ತೀರ್ಪುಗಾರರ ಆಯ್ಕೆ ವಿಭಾಗದಲ್ಲಿ ವೈದ್ಯರಾದ ಡಾ.ಚೈತ್ರ ನಾವಡ, ಛಾಯಾಗ್ರಾಹಕರಾದ ಸಿ.ಎನ್ ನಾಗರಾಜ್ ತೀರ್ಪುಗಾರರಾಗಿ ಸಹಕರಿಸಿದ್ದರು.

ತೀರ್ಪುಗಾರರ ಆಯ್ಕೆ
ಅತೀ ಹೆಚ್ಚು ಫೇಸ್ಬುಕ್ ಲೈಕ್ ಪಡೆದ ಮೂರು ಫೋಟೋಗಳು