ಕಲಿಯುಗದ ಕರ್ಣ,ಮಂಡ್ಯದ ಗಂಡು ದಿ|ರೆಬೆಲ್ ಸ್ಟಾರ್ ಡಾ|ಅಂಬರೀಷ್ ಹಾಗೂ ಅಂಬಿ ಆಪ್ತರಾದ ಅಗಲಿದ ಮೈಸೂರಿನ ರಾಷ್ಟ್ರೀಯ ಕ್ರೀಡಾ ಪಟು ಶಿವಕುಮಾರ್ (ಅಯ್ಯ)ಸ್ಮರಣಾರ್ಥ 2 ದಿನಗಳ ಕ್ರಿಕೆಟ್ ಪಂದ್ಯಾಟವನ್ನು ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ ಮಾರ್ಚ್ 9ರ ಶನಿವಾರ ಹಾಗೂ ಮಾ 10ರ ರವಿವಾರ ಹಗಲಿನಲ್ಲಿ ಏರ್ಪಡಿಸಲಾಗಿದೆ.
ದೂರದ ಚೆನ್ನೈ, ಬೆಂಗಳೂರು,ಮೈಸೂರು,ದಾವಣಗೆರೆ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 17 ತಂಡಗಳು ಭಾಗವಹಿಸಲಿದ್ದು ರೋಚಕ ಹಣಾಹಣಿಗೆ ಕುಂಬಾರಕೊಪ್ಪಲಿನ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಪ್ರತಿಷ್ಟಿತ ತಂಡಗಳಾದ ನ್ಯಾಶ್ ನ ಸ್ಪೀಡ್ ಸ್ಟಾರ್ ಪ್ರವೀಣ್ ಗೌಡ,ಜೈ ಕರ್ನಾಟಕದ ಕಪ್ತಾನ ಆಲ್ ರೌಂಡರ್ ಮಾರ್ಕ್ ಮಹೇಶ್,ಭಾರತೀಯ ವಿಶೇಷ ಚೇತನರ ತಂಡದ ಆಟಗಾರ ಸತೀಶ್ ರವರು ಪ್ರತಿನಿಧಿಸಿದ ಶ್ರೇಷ್ಠ ತಂಡವಾದ ಎಸ್.ಎಮ್.ಸಿ.ಸಿ( ಶ್ರೀ ಮಹದೇಶ್ವರ ಕ್ರಿಕೆಟ್ ಕ್ಲಬ್) ಈ ಪ್ರತಿಷ್ಟಿತ ಪಂದ್ಯಾಕೂಟವನ್ನು ಸಂಘಟಿಸಿದ್ದಾರೆ.
ಶ್ರೀಯುತ ಪ್ರಭಾಕರ್ ಅವರ ಅಧ್ಯಕ್ಷತೆಯಲ್ಲಿ, ಸಂಘಟಕರಾದ ನಾಗ,ಅಶೋಕ್,ಗುರು,ಮಧು,ಶಿವು ಹಾಗೂ ಮನುರವರ ಕೂಡುವಿಕೆಯಲ್ಲಿ ನೆರವೇರಲಿದೆ.
ಅಯ್ಯ(ಶಿವಕುಮಾರ್) ಕೂಡ ರಾಷ್ಟ್ರಮಟ್ಟದ ಕಬಡ್ಡಿ ಹಾಗೂ ಕುಸ್ತಿ ಇನ್ನಿತರ ಎಲ್ಲಾ ಪ್ರಕಾರದ ಕ್ರೀಡೆಯಲ್ಲೂ ಸಾಕಷ್ಟು ಹೆಸರುಗಳಿಸಿದ್ದರು.ಕುಂಬಾರುಕೊಪ್ ಪಲು ಗ್ರಾಮದ ಬೆನ್ನೆಲುಬಾಗಿ ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ದುರದೃಷ್ಟವಶಾ ತ್ ಕಳೆದ ಫೆಬ್ರವರಿ 9 ರಂದು ಮೃತಪಟ್ಟಿದ್ದರು.
ಪಂದ್ಯಾಕೂಟದ ಪ್ರಥಮ ಸ್ಥಾನಿ ತಂಡ 2 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಿ 1 ಲಕ್ಷ ಹಾಗೂ ನಗದು ಹಾಗೂ ಟ್ರೋಫಿ,ತೃತೀಯ ಸ್ಥಾನಿ 20,000 ಹಾಗೂ ಚತುರ್ಥ ಸ್ಥಾನಿ ತಂಡ 20,000 ಟ್ರೋಫಿ ಸಹಿತವಾಗಿ ಪಡೆದುಕೊಳ್ಳಲಿದೆ.ವೈಯಕ್ತಿಕವಾಗಿ ಬೆಸ್ಟ್ ಬೌಲರ್,ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.ಈ ಪಂದ್ಯಾಕೂಟದ ನೇರ ಪ್ರಸಾರ “M.Sports” ಯೂ ಟ್ಯೂಬ್ ಚಾನೆಲ್ ಮಾಡಲಿದೆಯೆಂದು ಪಂದ್ಯಾಕೂಟದ ವ್ಯವಸ್ಥಾಪಕ ಸಮಿತಿ ಪ್ರಕಟಿಸಿದೆ.
-ಕೋಟ ರಾಮಕೃಷ್ಣ ಆಚಾರ್ಯ