ಅಲೆವೂರು: ಅಲೆವೂರು ಗ್ರಾಮ ಪಂಚಾಯಿತಿ ವತಿಯಿಂದ ದಿ. ಅಲೆವೂರು
ಬದರೀ ನಾರಾಯಣ ಆಚಾರ್ಯ ಸ್ಮಾರಕ ಟ್ರಸ್ಟ್ ನ ಸಹಯೋಗದಲ್ಲಿ ನಡುಅಲೆವೂರು ಮುಖ್ಯರಸ್ತೆಯ “ಶ್ರೀಬದರೀನಗರ” ನಾಮಫಲಕದ ಉದ್ಘಾಟನೆ ಕಾರ್ಯಕ್ರಮ ಹಾಗೂ ವನಮಹೋತ್ಸವ, ಸಸಿ
ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.
ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪ ಅಂಚನ್ ನಾಮಫಲಕವನ್ನು ಉದ್ಘಾಟಿಸಿದರು. ಕಲ್ಮಂಜೆ ಮಹಾಲಿಂಗೇಶ್ವರ ದೇವಸ್ಥಾನ ಮುಖ್ಯ ಅರ್ಚಕ ಕಲ್ಮಂಜೆ ವೇದವ್ಯಾಸ ಉಪಾಧ್ಯ ಅವರು ಟ್ರಸ್ಟ್ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ದಯಾನಂದ ಬೆಣ್ಣೂರು, ಗ್ರಾಪಂ ಉಪಾಧ್ಯಕ್ಷ ಸುಧಾಕರ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಸೇರಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗ್ರಾಪಂ ಸದಸ್ಯರಾದ ರೂಪೇಶ್ ದೇವಾಡಿಗ ಮತ್ತು ಶಬರೀಶ್ ಸುವರ್ಣ, ಟ್ರಸ್ಟ್ ಅಧ್ಯಕ್ಷ ನಾಗರಾಜ್ ಕೆ.ಆರ್., ನಿವೃತ್ತ ಮುಖ್ಯೋಪಾಧ್ಯಾಯ ಬಿ. ವೆಂಕಟಕೃಷ್ಣ ರಾವ್ ಮಾರ್ಪಳ್ಳಿ, ಮಾಜಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಕೆ. ಶ್ರೀಶ ಉಪಾಧ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ 25 ಜನರಿಗೆ ಆಹಾರ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು. ಪ್ರಸನ್ನ ಹೆಬ್ಬಾರ್ ಪೆರ್ಡೂರು ಸ್ವಾಗತಿಸಿದರು. ಅಪರ್ಣ ವಂದಿಸಿದರು. ಗ್ರಾಪಂ ಸದಸ್ಯ ಗುರುಪ್ರಸಾದ್ ಸಾಮಗ ಕಾರ್ಯಕ್ರಮ ನಿರೂಪಿಸಿದರು.












