ಮಣಿಪಾಲ: ಯುವತಿ ನಾಪತ್ತೆ

ಮಣಿಪಾಲ: ಮಣಿಪಾಲದ ಬೋಡಾ ಶೀರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಭಟ್ಕಳ ಮೂಲದ ಮುಂಡಳ್ಳಿ ನಿವಾಸಿ ನಮಿತಾ (22) ಎಂಬುವವರು ಜುಲೈ 16ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ: 135 ಸೆಂ.ಮೀ ಎತ್ತರವಿದ್ದು, ಗೋಧಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆ ಮೊ.ನಂ: 9480805448, 9480805475 ಅಥವಾ ಕಂಟ್ರೋಲ್ ರೂಂ ನಂ: 0820-2570328 ಅನ್ನು ಸಂಪರ್ಕಿಸುವಂತೆ ಮಣಿಪಾಲ […]

ಪಡುಬಿದ್ರಿ: ರಸ್ತೆ ಅಪಘಾತ; ಸ್ಕೂಟರ್ ಸವಾರ ಮೃತ್ಯು

ಪಡುಬಿದ್ರಿ: ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿಯಾಗಿ ನವಿಲೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಸ್ಕೂಟರ್ ಸವಾರ ರಸ್ತೆಯಂಚಿನ ಕಲ್ಲೊಂದಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಬೆಳಪು ಪ್ರಸಾದ ನಗರ ನಿವಾಸಿ ಅಬ್ದುಲ್ (25) ಮೃತ ದುರ್ದೈವಿ. ಈತ ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪಡುಬಿದ್ರಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಉಚ್ಚಿಲ ಕಡೆಗೆ […]

ಮುಕ್ತ ವಿವಿ ಯಲ್ಲಿ ಎಂಬಿಎ ಕೋರ್ಸ್ ಆರಂಭ

ಉಡುಪಿ : ಕೇಂದ್ರ ಶಿಕ್ಷಣ ಸಚಿವಾಲಯದ ಶಾಸನಬದ್ಧ ಅಂಗವಾದ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನಿರ್ವಹಣಾ ವಿಭಾಗದಡಿ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ಕೋರ್ಸ್ ನಡೆಸಲು ಅನುಮತಿ ನೀಡಿದೆ. ಮುಕ್ತ ಹಾಗೂ ದೂರ ಶಿಕ್ಷಣ ಮಾದರಿಯಡಿ ಎಂಬಿಎ ಕೋರ್ಸ್ ನಡೆಸಲು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ಪಡೆದಿರುವ ದೇಶದ ಏಕೈಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಮುಕ್ತ ಹಾಗೂ ದೂರ ಶಿಕ್ಷಣ ಕಲಿಕಾ ವಿಧಾನದಡಿ ಎಂಬಿಎ ಕೋರ್ಸ್ಗೆ (ಜನರಲ್ […]

ಉಡುಪಿ: ಅಸಂಘಟಿತ ಕಾರ್ಮಿಕರಿಗೆ ಪರಿಹಾರ : ಪರಿಷ್ಕೃತ ಮಾರ್ಗಸೂಚಿ

ಉಡುಪಿ: ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿಕಾರ್ಮಿಕರು ಸೇರಿದಂತೆ ಒಟ್ಟು 11 ವಲಯದ ಅಸಂಘಟಿತ ಕಾರ್ಮಿಕರಿಗೆ ತಲಾ 2,000 ರೂ. ಗಳ ಪರಿಹಾರ ಧನ ನೀಡುವ ಕುರಿತು ಮಾರ್ಗಸೂಚಿಯಲ್ಲಿ ಮಾರ್ಪಾಡುಗಳನ್ನು ಸೇರಿಸಲಾಗಿದ್ದು, ಮೊಬೈಲ್ ಸಂಖ್ಯೆ ನಮೂದಿಸುವುದು ಐಚ್ಛಿಕವಾಗಿದ್ದು, ಉದ್ಯೋಗ ಪ್ರಮಾಣ ಪತ್ರವನ್ನು ಮಾರ್ಗಸೂಚಿಯಲ್ಲಿ ನಮೂದಿಸಿರುವ ಯಾವುದಾದರೂ ಅಧಿಕಾರಿ ಅಥವಾ ಕೆಲಸ ನಿರ್ವಹಿಸುತ್ತಿರುವ ಮಾಲೀಕರಿಂದ ನಿಗದಿತ […]

ಉಡುಪಿ: ತುಳು ಲಿಪಿ ಮಂದಾರ ಬಿಡುಗಡೆ ಕಾರ್ಯಕ್ರಮ

ಉಡುಪಿ: ತಾಳೆಗರಿ ಉಪಯೋಗಿಸುತ್ತಿದ್ದ ಕಾಲಘಟ್ಟದಲ್ಲಿ ತುಳು ಲಿಪಿ ಬಳಕೆಯಾಗುತ್ತಿತ್ತು. ಪುರಾತನವಾದ ಐತಿಹಾಸಿಕ ಹಿನ್ನೆಲೆಯಿರುವ ತುಳು ಭಾಷೆ, ತುಳು ಲಿಪಿ ಮಧ್ವಾಚಾರ್ಯರ ಕಾಲಘಟ್ಟದಲ್ಲಿಯೂ ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಅಷ್ಠಮಠಗಳಲ್ಲಿ ಪುರಾವೆಗಳಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಉಡುಪಿ ಪ್ರೆಸ್ ಕ್ಲಬ್ ನಲ್ಲಿ  “ತುಳು ಲಿಪಿ ಮಂದಾರ” ಬಿಡುಗಡೆ ಕಾರ್ಯಕ್ರಮದಲ್ಲಿ “ತುಳು ಲಿಪಿ ಮಂದಾರ” ವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಾಂತ್ಯಗಳು ಬದಲಾದಂತೆ ಆಡಳಿತ ವ್ಯವಸ್ಥೆಗಳಿಂದಾಗಿ ತುಳು ಲಿಪಿ ಜನಮಾನಸದಿಂದ ದೂರವಾಗಿದೆ. ಪ್ರಸಕ್ತ ದಿನಗಳಲ್ಲಿ ತುಳು ಭಾಷೆ ತುಳು ಲಿಪಿಯ […]