ಅಕ್ಷಯ್ ಕುಮಾರ್ ಅಭಿನಯದ “ಕೇಸರಿ” ಚಿತ್ರ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಇದೇ ಮಾ.21ರಂದು ಜಗತ್ತಿನಾದ್ಯಂತೆ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ನೈಜ ಕಥೆಗಳಿಗೆ ನಾನೇ ದಿ ಬೆಸ್ಟ್ ಎಂದು ಮತ್ತೊಮ್ಮೆ ಅಕ್ಷಯ್ ಕುಮಾರ್ ತೋರಿಸಲು ಹೊರಟಂತಿದೆ ಈ ಟ್ರೈಲರ್.

1987ರಲ್ಲಿ ನಡೆದ ಸಾರಗರ್ಹಿ ಕದನದ ಕಥೆ ಹೊಂದಿರುವ ಕೇಸರಿ ಸಿನಿಮಾ ಅತ್ಯಂತ ರೋಚಕವಾಗಿ ಮೂಡಿಬಂದಿದೆ ಈ ಕದನದಲ್ಲಿ 21 ಸಿಖ್ಖರು, 10 ಸಾವಿರ ಅಫ್ಘಾನ್ ಗಳ ವಿರುದ್ಧ ಹೋರಾಡಿದ್ದರು. ಆ ದೃಶ್ಯಗಳು ಕೇಸರಿ ಚಿತ್ರದಲ್ಲಿ ಭಯಾನಕವಾಗಿ ಕಾಣಿಸಿಕೊಂಡಿದೆ.

ಅಕ್ಷಯ್ ಕುಮಾರ್ ಕೇಸರಿ ಪೋಸ್ಟರ್ ಹೇಳುತ್ತಿದೆ ಸಿಖ್ಖರ ವೀರಕಥೆಕೇಸರಿ ಟ್ರೈಲರ್ ನಲ್ಲಿರುವ ಬಹುತೇಕ ದೃಶ್ಯಗಳು ಮೈನವಿರೇಳಿಸುಂತಿದೆ. ಅದರಲ್ಲೂ ಟ್ರೈಲರ್ ಕೊನೆಯಲ್ಲಿ ಅಕ್ಷಯ್ ಕುಮಾರ್ ತನ್ನ ಕೈಯಲ್ಲಿದ್ದ ಕತ್ತಿಯನ್ನು ಎದುರಾಳಿ ಎದೆಗೆ ನುಗ್ಗಿಸಿ ಹೊರತೆಗೆಯುವ ದೃಶ್ಯ ಸೂಪರ್ ಆಗಿದೆ.

 ಹವಿಲ್ದಾರ್ ಇಷಾರ್ ಸಿಂಗ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು. ಪರಿಣಿತಿ ಚೋಪ್ರಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಕೇಸರಿ ಚಿತ್ರವನ್ನು ಪಂಜಾಬಿಯ ಖ್ಯಾತ ನಿರ್ದೇಶಕ ಅನುರಾಗ್ ಸಿಂಗ್ ಡೈರೆಕ್ಟ್ ಮಾಡುತ್ತಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಕೇಪ್ ಆಫ್ ಗುಡ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.