ಕಾರ್ಕಳ: ಅಜೆಕಾರು ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶ್ರೀವಚನ ನೀಡಿ ಮಾತನಾಡಿ ತಾನು ಬದುಕುವ ಜತೆಗೆ ಇತರರನ್ನು ಬದುಕಲು ಬಿಡುವುದೇ ಜೀವನ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಸಕ ಸುನೀಲ್ ಕುಮಾರ್ ವಹಿಸಿ ಮಾತನಾಡಿ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ರಾಂತಿ ಮಾಡಿದೆ ಎಂದರು.

ಫಲಪುಷ್ಪ ಸಮರ್ಪಣೆಯನ್ನು ಆಳ್ವಾಸ್ ಶಿಕ್ಣಣ ಸಂಸ್ಥೆಗಳ ಮೋಹನ್ ಆಳ್ವ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಶಿವರಾಮ್ ಶೆಟ್ಟಿ, ಬಳ್ಳಾರಿ ಮರ್ಚಡ್ ಟ್ರಸ್ಟ್ ಅಧ್ಯಕ್ಷ ಎಮ್. ಜಿ. ಗೌಡ್, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಉದ್ಯಮಿ ಶಶಿಧರ್ ಶೆಟ್ಟಿ, ಜಗದೀಶ್ ಕಾರಂತ, ಕಮಲಾಕ್ಷ ನಾಯಕ್, ಡಾ| ಸಂತೋಷ್ ಕುಮಾರ್ ಶೆಟ್ಟಿ ಅಜೆಕಾರು ಉಪಸ್ಥಿತರಿದ್ದರು.

ಡಾ. ಸುಧಾಕರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.



















