ಮುಂಬೈ: ಮುಂಬೈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್, ಭಾರತ ಮೂಲದ ಅಜಾಜ್ ಪಟೇಲ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇನ್ನಿಂಗ್ಸ್ವೊಂದರಲ್ಲಿ ಎಲ್ಲಾ 10 ವಿಕೆಟ್ಗಳನ್ನು ಪಟೇಲ್ ಕಬಳಿಸುವ ಮೂಲಕ ಭಾರತದ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ 1956ರಲ್ಲಿ ಇಂಗ್ಲೆಂಡ್ನ ಜಿಮ್ ಲೇಕರ್, ಭಾರತದ ಅನಿಲ್ ಕುಂಬ್ಳೆ 1999ರಲ್ಲಿ ಈ ಸಾಧನೆ ಮಾಡಿದ್ದರು.
ಇದೀಗ ಕಿವೀಸ್ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್, ಇನ್ನಿಂಗ್ಸ್ವೊಂದರಲ್ಲಿ 10 ವಿಕೆಟ್ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿದರು. ಈ ಹಿಂದೆ ನ್ಯೂಜಿಲೆಂಡ್ ಆಲ್ರೌಂಡರ್ ರಿಚರ್ಡ್ ಹ್ಯಾಡ್ಲಿ 9 ವಿಕೆಟ್ ಪಡೆದಿದ್ದು ಗರಿಷ್ಠ ಸಾಧನೆಯಾಗಿತ್ತು.