ಮಲ್ಪೆ: ಬಿಪರ್ ಜಾಯ್ ಚಂಡಮಾರುತದ ಬಳಿಕ ಇದೀಗ ಮಲ್ಪೆಯ ಸಮುದ್ರ ತೀರಕ್ಕೆ ವಿಚಿತ್ರ ವಸ್ತುಗಳು ತೇಲಿ ಬರುತ್ತಿದ್ದು ಮಲ್ಪೆ ಬೀಚ್ ನಲ್ಲಿ ಅಪರೂಪದ ಬಿಳಿ ಬಣ್ಣ ತ್ಯಾಜ್ಯ ಕಾಣಸಿಕ್ಕಿದೆ. ಶ್ಯಾವಿಗೆಯಂತಿರುವ ಈ ಪದಾರ್ಥವು ಸುಮಾರು ಎರಡು ದಶಕದ ನಂತರ ಇಲ್ಲಿನ ಸಮುದ್ರ ದಡದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಇಲ್ಲಿನ ಸ್ಥಳೀಯರು ಗಂಗಾಮಾತೆಯ ಕೂದಲು ಎಂದು ಹೇಳುತ್ತಾರೆ.
ಇದು ಸುಮಾರು 10 ವರ್ಷದ ಹಿಂದೆ ಇಲ್ಲಿ ಕಾಣಸಿಕ್ಕಿದ್ದು, ಈ ಬಾರಿ ಯಥೇಚ್ಚವಾಗಿ ತೀರದಲ್ಲಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಆದರೆ ಇದನ್ನು ದಡಾದಿಂದ ತೆರವುಗೊಳಿಸುವ ಹಾಗಿಲ್ಲ ಮತ್ತು ಜೋರಾದ ಅಲೆಗೆ ಇದು ತಾನೇತಾನಾಗಿ ಮತ್ತೆ ಸಮುದ್ರವನ್ನು ಸೇರಿಕೊಳ್ಳುತ್ತದೆ. ಇದು ಮೀನುಗಳಿಗೆ ಬೇಕಾದ ಆಹಾರವಾಗಿದ್ದು ಸಮುದ್ರಕ್ಕೆ ವಾಪಾಸು ಸೇರಿ ಕೊಳೆತು ಮೀನುಗಳಿಗೆ ದೊರೆಯುತ್ತಾದುದರಿಂದ ಇದನ್ನು ತೆರವುಗೊಳಿಸುವುದಿಲ್ಲ.