ಉಡುಪಿ: ಕರಾವಳಿ ಭಾಗದಲ್ಲಿ ಸಿ.ಎ, ಸಿ.ಎಸ್, ಎಂ.ಬಿ. ಎ ಮುಂತಾದ ವೃತ್ತಿಪರ ಶಿಕ್ಷಣದೊಂದಿಗೆ ಬಿ.ಕಾಂ ಬಿ. ಸಿಎ ಪದವಿಗೆ ತರಬೇತಿ ನೀಡುತ್ತಿರುವ, ಸಿ. ಎ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತ್ರಿಶಾ ಸಂಸ್ಥೆ ಕಾಮರ್ಸ್ ಶಿಕ್ಷಣಕ್ಕೆ ಹೆಸರಾಗಿದೆ. ದೇಶದ ವಿವಿಧ ಭಾಗದ ಶಿಕ್ಷಣ ತಜ್ಞರಿಂದ ಅತ್ಯುತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ರ್ಯಾಂಕ್ ಗಳಿಸುತ್ತಿದ್ದಾರೆ.
ತ್ರಿಶಾ ಕಾಲೇಜು ನುರಿತ ಶಿಕ್ಷಣ ತಜ್ಞರಿಂದ ತರಬೇತಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತ್ರಿಶಾ ಕಾಲೇಜು ಕಾಮರ್ಸ್ ಪ್ರಿಯರ ಆದ್ಯತೆಯ ಸಂಸ್ಥೆಯಾಗಿದೆ. ಬಿಕಾಂ ಪದವಿಯೊಂದಿಗೆ ಸಿ.ಎ, ಸಿ.ಎಸ್ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ನೀಡುವ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆ (ಡೇ ಹಾಗೂ ಈವನಿಂಗ್ ಕಾಲೇಜು) ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಹಾಗೂ ಮಂಗಳೂರಿನ ಅಳಕೆಯಲ್ಲಿ ತ್ರಿಶಾ ಕಾಲೇಜ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜು ಎನ್ನುವ ಶಾಖೆಯನ್ನು ಸ್ಥಾಪಿಸಿಕೊಂಡು ರಾಜ್ಯದ ಬೇರೆ ಬೇರೆ ಭಾಗದ ವಿದ್ಯಾರ್ಥಿಗಳಿಗೆ ವಿನೂತನ ಶೈಲಿಯ ಬಿಕಾಂ, ಬಿಸಿಎ ಪದವಿಯೊಂದಿಗೆ ಮೌಲ್ಯಾಧಾರಿತ ಹಾಗೂ ಜೀವನ ಕೌಶಲ್ಯದೊಂದಿಗೆ ಉದ್ಯೋಗ ಕ್ಷೇತ್ರಕ್ಕೆ ಪೂರಕವಾದ ಎಲ್ಲ ವಿಷಯವನ್ನು ಪ್ರಾಯೋಗಿಕವಾಗಿ ಬೋಧಿಸುತ್ತಿದೆ.
ಪ್ರತಿಷ್ಠಿತ ಕಂಪೆನಿಗಳು ಕ್ಯಾಂಪಸ್ ಇಂಟರ್ವ್ಯೂ ನಡೆಸುವುದರಿಂದ ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿಯೇ ಕಂಪನಿಗಳಿಗೆ ಸೇರುತ್ತಿದ್ದಾರೆ. ತ್ರಿಶಾ ಸಂಧ್ಯಾ ಕಾಲೇಜು. ಸಿ. ಎ ಸಿ.ಎಸ್ ನ ಜೊತೆ ಜೊತೆಗೆ ಪದವಿಯನ್ನು ಪಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ ತ್ರಿಶಾ ಸಂಧ್ಯಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಉದ್ಯೋಗದ ಜೊತೆಗೆ ಓದುವಿಕೆಯನ್ನು ಪೂರ್ಣಗೊಳಿಸುವ ಅಗತ್ಯವಿರುವ ವಿದ್ಯಾರ್ಥಿಗಳ ಪಾಲಿಗೆ ಶಕ್ಷಣಿಕ ಸಾಂಸ್ಕೃತಿಕ ಬೆಳವಣಿಗೆಯೊಂದಿಗೆ ಕೌಶಲ್ಯ ವೃದ್ಧಿಯು ಸಾಧ್ಯವಾಗಿದೆ.
ಕಳೆದ ಎರಡು ವರ್ಷದಿಂದ ವಿದ್ಯಾರ್ಥಿಗಳು ಸಿ. ಎ ಫೈನಲ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್ ಗಳಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಕಾಲೇಜಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಯ ಅಡಿಯಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವ, ಬೆಳವಣಿಗೆಗೆ ಪೂರಕವಾಗುವ ಮೆಂಟರ್ ಶಿಪ್ ಕೂಡ ಅಳವಡಿಸಲಾಗಿದೆ. ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಅಲ್ಲದೆ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಫೋಕಸ್ 360:
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವ್ಯಕ್ತಿತ್ವ ವಿಕಸನ, ಎಂ.ಬಿ.ಎ ಪರಿಕ್ಷಾ ತಯಾರಿ, ಸ್ವ ಉದ್ಯಮ ಮಾಡಲು ಬಯಸುವವರಿಗೆ, ತ್ರಿಶಾ ಸಂಸ್ಥೆಯು ಫೋಕಸ್ 360 (Focus 360) ಎನ್ನುವ ವಿನೂತನ ಬಿಕಾಂ ಪದವಿಯನ್ನು ನೀಡುತ್ತಲಿದ್ದು, ವಾರದಲ್ಲಿ ಎರಡು ದಿನ ಮೇಲ್ಕಂಡ ವಿಷಯಗಳಿಗೆ ವಿವಿಧ ತಜ್ಞರಿಂದ ತರಬೇತಿಯನ್ನು ನಡೆಸಿ, ಜೊತೆಗೆ ಅನೇಕ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಕೈಗಾರಿಕಾ ಭೇಟಿಯಂತಹ ವಿನೂತನ ಕಲಿಕಾ ಕ್ರಮಗಳನ್ನು ನಡೆಸಲಾಗುವುದು.
ವಿಶಾಲ ಸುಸಜ್ಜಿತ ತರಗತಿಗಳು, ಆಧುನಿಕತೆ ಯೊಂದಿಗೆ ವಿದ್ಯಾರ್ಥಿ ಸ್ನೇಹಿ ಕಾಲೇಜು ಕ್ಯಾಂಪಸ್, ವಿಷಯವಾರು ನೈಪುಣ್ಯವುಳ್ಳ ಶಿಕ್ಷಕ ವೃಂದ, ಹುಡುಗರುಹಾಗೂ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ಕಾಲೇಜಿನಲ್ಲಿಯೇ ಕ್ಯಾಂಟೀನ್, ವಿಶಾಲವಾದ ಆಟದ ಮೈದಾನ ಹಾಗೂ ಗ್ರಂಥಾಲಯ ಸೌಲಭ್ಯಗಳಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಅನುಭವದೊಂದಿಗೆ ಅವರ ಸಾಮರ್ಥ್ಯ ತಿಳಿದು ಅದಕ್ಕೆ ಪೂರಕವಾದ ಕೌನ್ಸೆಲಿಂಗ್ ವ್ಯವಸ್ಥೆ ತ್ರಿಶಾ ಅಡ್ಮಿಷನ್ ಟೆಸ್ಟ್ (TAT) ಮೂಲಕ ದೊರಕಲಿದೆ. ಏಪ್ರಿಲ್ 23 ರಂದು ಬೆಳಿಗ್ಗೆ 10 ರಿಂದ 12 ರ ವರೆಗೆ ನಡೆಯುವ ಪರೀಕ್ಷೆಗೆ ಯಾವುದೇ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು https://tinyurl.com/EXAMTAT ಮೂಲಕ ನೋಂದಾಯಿಸಿ ಕೊಳ್ಳಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.