ಅದಿತಿ ಸ್ವಾಮಿ 18 ವರ್ಷದೊಳಗಿನವರ ಅರ್ಹತಾ ಸುತ್ತಿನಲ್ಲಿ ದಾಖಲೆ

ಮೆಡೆಲಿನ್ : ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆಯುತ್ತಿರುವ 18 ವರ್ಷದೊಳಗಿನವರ ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ಭಾರತದ ಅದಿತಿ ಸ್ವಾಮಿ ಅವರು ವಿಶ್ವ ದಾಖಲೆಯನ್ನು ನಿರ್ಮಿಸಿದರು.16 ಅದಿತಿ ಸ್ವಾಮಿ ಕೊಲಂಬಿಯಾದ ಮೆಡೆಲಿನ್‌ನಲ್ಲಿ ನಡೆದ (ಬಿಲ್ಲುಗಾರಿಕೆ ) ಆರ್ಚರಿ ವಿಶ್ವಕಪ್‌ನ ಮೂರನೇ ಹಂತದಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ

ಕಳೆದ ಡಿಸೆಂಬರ್‌ನಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾಕಪ್ ಲೆಗ್ 3 ರಲ್ಲಿ ಬೆಳ್ಳಿ ಗೆದ್ದ 16 ವರ್ಷದ ಅದಿತಿ, ಮಂಗಳವಾರ ನಡೆದ ಪಂದ್ಯದಲ್ಲಿ 720 ಕ್ಕೆ 711 ಅಂಕಗಳನ್ನು ಕಲೆ ಹಾಕುವ ಮೂಲಕ ಮಹಿಳೆಯರ ಕಂಪೌಂಡ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

ಇತ್ತೀಚೆಗಷ್ಟೇ ಮೇ ತಿಂಗಳಲ್ಲಿ ಲಿಕೊ ಅರೆಯೊಲಾ ಅವರು (698) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದರು. ಅತ್ಯುತ್ತಮ ಆಟ ಪ್ರದರ್ಶಿಸಿ 705 ಅಂಕ ಗಳಿಸಿದ್ದರು. ಬಳಿಕ ತಮ್ಮ ಅನುಭವ ಹಂಚಿಕೊಂಡ ಅದಿತಿ ” ನನಗೆ ಕೇವಲ 16 ವರ್ಷ. ಇದೊಂದು ಅದ್ಭುತ ಅನುಭವವಾಗಿದ್ದು, ಅಪಾರ ಸಂತಸವಾಗುತ್ತಿದೆ. ಇಷ್ಟೊಂದು ಸ್ಕೋರ್ ಗಳಿಸುವ ಯೋಚನೆಯೇ ಇರಲಿಲ್ಲ. ಈ ರೀತಿ ಅಂಕ ಗಳಿಸಿರುವುದು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ ” ಎಂದರು.

ಇನ್ನು 50 ಮೀಟರ್​ 72 ಆಯರೊ ವಿಭಾಗದಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿತ್ತು. ವಿಶ್ವಕಪ್‌ ಸ್ಪರ್ಧೆಯಲ್ಲಿ ಎರಡು ಚಿನ್ನ ಗೆದ್ದಿರುವ ಜ್ಯೋತಿ ಸುರೇಖಾ ವೆನ್ನಂ ಹಾಗೂ ಸಾರಾ ಲೊಪೆಜ್ ಅವರ ಸ್ಪರ್ಧೆಯನ್ನು ಅದಿತಿ ಸ್ವಾಮಿ ಎದುರಿಸಿದರು. ಮಹಿಳಾ ವಿಭಾಗದಲ್ಲಿ ಪರನೀತ್ ಕೌರ್ 700 ಅಂಕ ಪಡೆದು ಮಿಂಚಿದರು.

ಓಜಸ್ ಡಿಯೋಟಾಲೆ 703 ಅಂಕಗಳೊಂದಿಗೆ 13ನೇ ಸ್ಥಾನ ಗಳಿಸಿದರೆ, ಪ್ರಥಮೇಶ್ ಸಮಾಧಾನ್ ಜಾವ್ಕರ್ ಒಂದು ಅಂಕ ಹಿನ್ನಡೆಯೊಂದಿಗೆ 19ನೇ ಸ್ಥಾನ ಪಡೆದರು. ರಜತ್ ಚೌಹಾಣ್ (698) 28 ನೇ ಸ್ಥಾನದಲ್ಲಿದ್ದರು. ಭಾರತೀಯ ಸಂಯುಕ್ತ ಪುರುಷರ ತಂಡವು 2112 ಅಂಕಗಳೊಂದಿಗೆ ಯುಎಸ್‌ಎ ನಂತರ ಎರಡನೇ ಸ್ಥಾನಕ್ಕೇರಿತು.

ಅದಿತಿ, ಜ್ಯೋತಿ (708) ಮತ್ತು ಪರನೀತ್ ಕೌರ್ (700) ಅವರಿರುವ ಭಾರತದ ಮಹಿಳಾ ಸಂಯುಕ್ತ ತಂಡವು ಅರ್ಹತೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಕೊರಿಯಾ (2120) ಸ್ಥಾಪಿಸಿದ ತಂಡದ ವಿಶ್ವ ದಾಖಲೆಯನ್ನು ಕೇವಲ ಒಂದು ಅಂಕದಿಂದ ಕಳೆದುಕೊಂಡಿತು. ಇನ್ನು ವಿಶ್ವಕಪ್‌ನ ಮೊದಲ ಎರಡು ಹಂತಗಳಲ್ಲಿ ಹೊರಗುಳಿದ ಅನುಭವಿ ಅಭಿಷೇಕ್ ವರ್ಮಾ ಪುನರಾಗಮನವನ್ನು ಮಾಡುವ ಮೂಲಕ ಎಂಟನೇ ಸ್ಥಾನ (707 ಅಂಕ) ಗಳಿಸಿ ಭಾರತೀಯರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.