ನಟಿ ರಿಯಾ ಚಕ್ರವರ್ತಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು

ಮುಂಬೈ: ಬಾಲಿವುಡ್ ನಟ ಸುಶಾಂತ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟಿನ ಆರೋಪದಡಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ನಟಿ ರಿಯಾ ಚರ್ಕವರ್ತಿಗೆ ಕೊನೆಗೂ ಜಾಮೀನು ಮಂಜೂರಾಗಿದೆ.

ಬಾಂಬೈ ಹೈಕೋರ್ಟ್ ರಿಯಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದರಿಂದ ಒಂದು ತಿಂಗಳ ನಂತರ ರಿಯಾ ಚರ್ಕವರ್ತಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಒಂದು ತಿಂಗಳಿನಿಂದ ರಿಯಾ ಚರ್ಕವರ್ತಿ ಜೈಲಿನಲ್ಲಿದ್ದು, ಜಾಮೀನು ಕೋರಿ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದರು. ರಿಯಾ ಚರ್ಕವರ್ತಿಗೆ ಒಂದು ಲಕ್ಷ ರುಪಾಯಿ ಶೂರಿಟಿ ಭದ್ರತೆ ಆಧಾರದ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.