‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ಅನು ಪ್ರಭಾಕರ್, 35ವರ್ಷಗಳ ಹಿಂದಿನ ಶೂಟಿಂಗ್‌ ನೆನಪು ಹಂಚಿಕೊಂಡ ನಟಿ

ರಜನಿಕಾಂತ್, ನಾರ್ಜುನ್‌ & ರವಿಚಂದ್ರನ್‌ ಜೊತೆಗೆ ಬಾಲನಟಿ ಅನು ಪ್ರಭಾಕರ್!
ಈಶ್ವರಿ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣದವಾದ ಅದ್ಭುತ ಸಿನಿಮಾ ‘ಶಾಂತಿ ಕ್ರಾಂತಿ’. ಪ್ಯಾನ್‌ ಇಂಡಿಯಾ ಕಲ್ಪನೆ ಇಲ್ಲದ ಕಾಲದಲ್ಲಿ 1991ರಲ್ಲಿ ಮಲ್ಟಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕ್ರಮೇಣ ಕ್ರೇಜಿ ಸ್ಟಾರ್ ರವಿಚಂದ್ರನ್‌, ಸೂಪರ್ ಸ್ಟಾರ್ ರಜನಿಕಾಂತ್‌, ನಾಗಾರ್ಜುನ್‌ ಅಕ್ಕಿನೇನಿ ಅವರು ಅಭಿನಯಿಸಿದ ಪ್ಯಾನ್‌ ಇಂಡಿಯಾ ಸಿನಿಮಾ ಇದು.

ಆ ಕಾಲದಲ್ಲಿ 10ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾದ ಹೈ ಬಜೆಟ್‌ ಸಿನಿಮಾ. ಹಲವು ರೆಕಾರ್ಡ್‌ಗಳನ್ನ ತನ್ನ ಮುಡಿಗೇರಿಸಿಕೊಂಡ ಸಿನಿಮಾ ಇದು. ಆದರೆ, ಸಿನಿಮಾ ಥೀಯಟರ್‌ಗಳಲ್ಲಿ ಓಡಲಿಲ್ಲ. ಪ್ರಯೋಗಾತ್ಮಕ ಕಥೆ ಮತ್ತು ಚಿತ್ರಕಥೆ ಹೊಂದಿದ್ದು, ಈಗೀನ ಜನತೆಗೆ ಇಷ್ಟವಾಗ್ತಿದೆ. ಸಿನಿಮಾವನ್ನ ರೀ-ರಿಲೀಸ್‌ ಮಾಡಿ ಎಂದು ಟ್ರೆಂಡ್‌ ಆಗುತ್ತಿದೆ.

35ವರ್ಷಗಳ ಹಿಂದೆ ನಟಿ ಅನು ಪ್ರಭಾಕರ್‌ ಮುಖರ್ಜಿ ಅವರು ‘ಶಾಂತಿ ಕ್ರಾಂತಿ’ ಸಿನಿಮಾ ಗೀತೆಯಲ್ಲಿ ಅಭಿನಯಿಸಿದ್ದರು. ‘ಎಕ್ಸ್‌ಕ್ಯೂಸ್ ಮಿ'(Excuse Me) ಸಿನಿಮಾ ಖ್ಯಾತಿಯ ಸುನೀಲ್‌ ರಾವ್‌ ಅವರ ಜೊತೆಗೆ ಬಾಲ್ಯದಲ್ಲಿ ಕಾಣಿಸಿಕೊಂಡಿದ್ದರು. “ಎಲ್ಲರೂ ‘ಶಾಂತಿ ಕ್ರಾಂತಿ’ ಸಿನಿಮಾ ಬಗ್ಗೆ ಮಾತ್ನಾಡುತ್ತಿದ್ದೀರ. ಸಿನಿಮಾ ಜಗತ್ತಿನ ಮಾಂತ್ರಿಕ ವಿ.ರವಿಚಂದ್ರನ್‌ ಸರ್‌ ಜೊತೆಗಿನ ನೆನಪುಗಳನ್ನ, ‘ಶಾಂತಿ ಕ್ರಾಂತಿ’ ಸಿನಿಮಾ ಶೂಟಿಂಗ್‌ ಕ್ಷಣಗಳನ್ನ ಹಂಚಿಕೊಳ್ಳುತ್ತಿದ್ದೇನೆ” ಎಂದು ಕೆಲವು ಫೋಟೋಗಳನ್ನ ಶೇರ್‌ ಮಾಡಿದ್ದಾರೆ ನಟಿ ಅನು ಪ್ರಭಾಕರ್‌ ಮುಖರ್ಜಿ.

ಅನು 9 ವರ್ಷದ ವಯಸ್ಸಿನಲ್ಲಿ ನಟಿ ಅನು ಪ್ರಭಾಕರ್‌ ‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ನಟನೆ.

ರಜನಿಕಾಂತ್‌ ತಮಿಳು ಭಾಷೆಯಲ್ಲಿ ನಟ ರಜನಿಕಾಂತ್‌ ಅವರು ಕ್ರಾಂತಿ ಪಾತ್ರ ಮಾಡಿದ್ದರು, ಅವರ ಜೊತೆಗೆ ಬಾಲ ನಟಿ ಅನು ಪ್ರಭಾಕರ್‌.