ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಬೆಂಗಳೂರು: ಅಪಘಾತಕ್ಕೀಡಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಚಾರಿ ವಿಜಯ್​​ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ನ್ಯೂರೋ ಸರ್ಜನ್​ ಡಾ. ಅರುಣ್​ ನಾಯಕ್​ ತಿಳಿಸಿದ್ದಾರೆ.

ಸಂಚಾರಿ ವಿಜಯ್​ ಆರೋಗ್ಯ ಸ್ಥಿತಿ ಚಿಂತಾಕನಕವಾಗ್ತಿದೆ. ರಿಕವರಿ ಚಾನ್ಸ್​​ ಕಡಿಮೆ ಇದೆ. ಈ ವಿಷಯವನ್ನ ವಿಜಯ್​ ಅವರ ಕುಟುಂಬಕ್ಕೆ ಈಗಾಗಲೇ ತಿಳಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶನಿವಾರ ರಾತ್ರಿ ಅಪಘಾತಕ್ಕೀಡಾದ ನಟ ಸಂಚಾರಿ ವಿಜಯ್​ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಮೆದುಳಿನ ಬಲ ಭಾಗ ಗಾಯವಾಗಿದ್ದು ಹಾಗೂ ಬಲ ತೊಡೆ ಮೂಳೆ ಮುರಿದಿದೆ ಎಂದು ತಿಳಿದುಬಂದಿದೆ.