ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಗಾಯ

ಹಾಸನ: ಹೀರೋ ಸಿನಿಮಾದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿ ಗಾಯವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂದಲೆಳೆ ಅಂತರದಿಂದ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು. ಮೊದಲ ಬಾಂಬ್ ಸಿಡಿಸುವಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಎರಡನೇ ಬಾಂಬ್ ಸ್ಪೋಟಗೊಂಡಾಗ ರಿಷಬ್‌ ಗೆ ಬೆಂಕಿ ತಗುಲಿ ಗಾಯವಾಗಿದೆ ಎನ್ನಲಾಗಿದೆ.

ರಿಷಬ್ ಕಾಲಿಗೆ ಹಾಗೂ ಬೆನ್ನಿಗೆ ಸುಟ್ಟ ಗಾಯವಾಗಿದೆ. ಸಾಕಷ್ಟು ಮುಂಜಾಗೃತೆ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ.