‘ಪುಷ್ಪ 2: ದಿ ರೂಲ್’ ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್ ನಟ ಫಹಾದ್ ಫಾಸಿಲ್ ಅವರ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.
2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್ನ ಮುಂದುವರೆದ ಭಾಗ ಇದಾಗಿದೆ.ನಟ ಫಹಾದ್ ಫಾಸಿಲ್ ಜನ್ಮದಿನದ ಹಿನ್ನೆಲೆ ಪುಷ್ಪ 2: ದಿ ರೂಲ್ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ
ಪುಷ್ಪ 2: ದಿ ರೂಲ್ ಸಿನಿಮಾವನ್ನು ಸುಕುಮಾರನ್ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. 2023ರ ಡಿಸೆಂಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಸುನೀಲ್, ಅಜಯ್, ರಾವ್ ರಮೇಶ್, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್ ಮತ್ತು ರೂಬೆನ್ ಸಂಕಲನವಿದೆ.
ಅಲ್ಲು ಅರ್ಜುನ್ ಅವರು ಪುಷ್ಪ 2: ದಿ ರೂಲ್ಗಾಗಿ ಮತ್ತೊಂದು ವೇಳಾಪಟ್ಟಿಯನ್ನು ಪ್ರಾರಂಭಿಸಿದ್ದಾರೆ. ಹೈದರಾಬಾದ್ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮೂಲಗಳ ಪ್ರಕಾರ, ಪುಷ್ಪ 2ನ ಕೆಲವು ಪ್ರಮುಖ ದೃಶ್ಯಗಳನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗುತ್ತದೆ. ಅದಕ್ಕಾಗಿ ಬೃಹತ್ ಸೆಟ್ಗಳನ್ನು ಹಾಕಲಾಗಿದೆ. ಇದು ಮುಂದುವರೆದ ಭಾಗವಾಗಿರುವುದರಿಂದ, ಚಿತ್ರವನ್ನು ಪ್ರೇಕ್ಷಕರಿಗೆ ದೃಶ್ಯರೂಪವಾಗಿರಿಸಲು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ.
ಪುಪ್ಪ: ದಿ ರೈಸ್ ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಈ ಮೂಲಕ 2021ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.ಪುಷ್ಪ: ದಿ ರೈಸ್ ಸೂಪರ್ ಹಿಟ್: 2021ರ ಡಿಸೆಂಬರ್ 17 ರಂದು ಪುಷ್ಪ: ದಿ ರೈಸ್ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರ್ ನಿರ್ದೇಶನದ ಮೂಡಿಬಂದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನು ಸೆಳೆದಿತ್ತು. ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.
ಫಹಾದ್ ಫಾಸಿಲ್ ಅವರ ಜನ್ಮದಿನ. ಆಗಸ್ಟ್ 8 ರಂದು ನಟ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಪುಷ್ಪ 2: ದಿ ರೂಲ್ ಚಿತ್ರದ ಖಳನಾಯಕನ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಖಾಕಿ ಜಾಕೆಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ ಸಿಗರೇಟ್ ಸೇದುತ್ತಿರುವ ನೋಟದಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲದೇ ವಿಲನ್ ಪಾತ್ರಕ್ಕೆ ಬೇಕಾದಂತೆ ಅವರನ್ನು ತೋರಿಸಲಾಗಿದೆ. ಫಹಾದ್ ಫಾಸಿಲ್ ವಿಲನ್ ಲುಕ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.