ದೆಹಲಿ: ಕೆಂಪುಕೋಟೆಯ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಇದರ ನೇತೃತ್ವ ವಹಿಸಿದ್ದು ಪಂಜಾಬ್ ಚಿತ್ರನಟ ದೀಪ್ ಸಿಧು ಎಂಬುವುದು ತಿಳಿದು ಬಂದಿದೆ.
ಈತ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗ ಸಹ ಆಗಿದ್ದಾನೆ. ದೀಪ್ ಸಿಧು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದ್ದರು. ಗುರುದಾಸ್ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು. ಸದ್ಯ ಈ ವಿಷಯ ತಿಳಿಯುತ್ತಿದ್ದಂತೆ ದೀಪ್ ಸಿಧು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜತೆ ಇರುವ ಫೋಟೋಗಳು ವೈರಲ್ ಆಗಿವೆ.
ಇವರು ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ, ದೀಪ್ ನಡವಳಿಕೆ ಗಮನಿಸಿದ್ದರು. ಹೀಗಾಗಿ ದೀಪ್ನನ್ನು ಧರಣಿಯಿಂದ ಹೊರಗಿಟ್ಟಿದ್ದರು. ಇನ್ನು ಓರ್ವ ರೈತ ನಾಯಕರು ದೀಪ್ನನ್ನು ರೈತ ಹೋರಾಟದ ಶತ್ರು ಎಂದು ಕರೆದಿದ್ದಾರೆ. ಸದ್ಯ ಈಗ ರೈತ ಸಂಘಟನೆಗಳು ಈತನ ವಿರುದ್ಧ ತನಿಖೆಗೆ ಆಗ್ರಹಿಸಿದೆ.