ಕಟಪಾಡಿ: ಆಕಸ್ಮಿಕ ಅಗ್ನಿಅವಘಡಕ್ಕೆ ಮನೆ ಭಸ್ಮ; 3 ಲಕ್ಷ ರೂ. ಗೂ ಅಧಿಕ ಹಾನಿ

ಉಡುಪಿ: ಇಲ್ಲಿನ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಇಲ್ಲಿನ ವನಜ ಎನ್‌.ಕೆ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆ ಹಾಗೂ ದನದ ಕೊಟ್ಟಿಗೆ ಭಸ್ಮವಾಗಿದೆ. ಮನೆಯ ರಿಪೇರಿಗಾಗಿ ಮತ್ತು ದೈವದ ಗುಡಿ ಕಟ್ಟಲು ತಂದಿರಿಸಲಾಗಿದ್ದ ಮರದ ದಾರಂದಗಳು, ಕಿಟಕಿಗಳು, ಬೈಹುಲ್ಲು ಹಾಗೂ ವಿದ್ಯುತ್‌ ಸಲಕರಣೆಗಳು ಅಗ್ನಿಗೆ ಆಹುತಿಯಾಗಿವೆ. ಸ್ಥಳೀಯ ನಿವಾಸಿಗಳು ಮತ್ತು ಜಿಲ್ಲಾ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡವಾಗುವುದನ್ನು ತಪ್ಪಿಸಿದ್ದಾರೆ. ಅಗ್ನಿ ಅವಘಡದಿಂದ ಸುಮಾರು 3 ಲಕ್ಷ ರೂ. ಗೂ ಅಧಿಕ ಹಾನಿ ಸಂಭವಿಸಿದೆ ಎನ್ನಲಾಗಿದೆ.