ಕುಂದಾಪುರ : ಪುತ್ರಿಯ ನಾಮಕರಣಕ್ಕೆಂದು ಸಿಂಗಾಪುರದಿಂದ ಊರಿಗೆ ಬಂದಿದ್ದ ಕೋಟೇಶ್ವರದ ಮಾರ್ಕೋಡು ಮೂಲದ ಉದ್ಯಮಿ ವಿವೇಕಾನಂದ (42) ಇವರು ಗುರುವಾರ ರಾತ್ರಿ ನಡೆದ ಹೊಂಡಾ ಆಕ್ಟೀವಾ ಹಾಗೂ ಲಾರಿ ಡಿಕ್ಕಿಯಲ್ಲಿ ಮೃತ ಪಟ್ಟಿರುವ ಧಾರುಣ ಘಟನೆ ಸಂಭವಿಸಿದೆ.
ಮಾರ್ಕೋಡು ನಿವಾಸಿ ಶಂಕರನಾರಾಯಣ ಎನ್ನುವವರ ಪುತ್ರರಾಗಿರುವ ವಿವೇಕಾನಂದ, ಸಹೋದರನೊಂದಿಗೆ ಸಿಂಗಾಪುರದಲ್ಲಿ ಹೋಟೇಲ್ಉದ್ಯಮಿಯಾಗಿದ್ದರು. ಶನಿವಾರ ಮನೆಯಲ್ಲಿ ನಡೆಯಲಿದ್ದ ಪುತ್ರಿಯ ನಾಮಕರಣ ಕಾರ್ಯಕ್ರಮಕ್ಕೆಂದು ಬುಧವಾರ ಊರಿಗೆ ಬಂದಿದ್ದ ಅವರು ಗುರುವಾರ ರಾತ್ರಿ ತಮ್ಮ ಆಕ್ಟೀವಾ ಹೊಂಡಾ ದ್ವಿಚಕ್ರ ವಾಹನದಲ್ಲಿ ಸಮಾರಂಭಕ್ಕೆಂದು ಸಾಮಾನು ಖರೀದಿಸಿ ಹಿಂತಿರುಗುತ್ತಿದಾಗ ದುರ್ಘಟನೆ ಸಂಭವಿಸಿದೆ.
ಕೋಟೇಶ್ವರದ ಹೆದ್ದಾರಿ ೬೬ ರ ಸರ್ವಿಸ್ರಸ್ತೆಯಲ್ಲಿ ಬರುತ್ತಿರುವಾಗ ಲಾರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ವೇಳೆ ನೆಲಕ್ಕೆ ಬಿದ್ದಿದ್ದ ಅವರ ತಲೆಯ ಮೇಲೆ ಇನ್ಸುಲೇಟರ್ಲಾರಿಯ ಚಕ್ರಗಳು ತಲೆಯ ಮೇಲೆ ಹರಿದ ಕಾರಣ ತಲೆಗೆ ಧರಿಸಿದ್ದ ಹೆಲ್ಮೆಟ್ಪುಡಿ ಪುಡಿಯಾಗಿ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.