ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಓಂ ಬೋಂಗಾಣೆ ಇವರಿಂದ ಅಭಂಗವಾಣಿ ಭಜನಾ ಕಾರ್ಯಕ್ರಮ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ಶುಕ್ರ ವಾರ ರಾತ್ರಿ ಪ್ರಸಿದ್ಧ ಗಾಯಕರಾದ ಓಂ ಬೋಂಗಾಣೆ ಮುಂಬೈ ಇವರಿಂದ – ಅಭಂಗವಾಣಿ ಭಜನಾ ಕಾರ್ಯಕ್ರಮ ನೆಡೆಯಿತು. ಭಜನಾ ಸಮಿತಿಯ ಅಧ್ಯಕ್ಷರಾದ ಕೆ ತುಳಸೀದಾಸ್ ಕಿಣಿ ಓಂ ಬೋಂಗಾಣೆಯವರನ್ನು ಗೌರವಿಸಿದರು. ಡಾ ಪಾಂಡುರಂಗ ಕಿಣಿ ಯು.ಎಸ್.ಎ, ಜಯದೇವ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.