ಶಿರ್ವ: ಆಟಿಯ ತಿಂಗಳ ಪ್ರಯುಕ್ತ ಜುಲೈ 31 ರಂದು ತುಳುನಾಡಿನ ವಿಶಿಷ್ಟ ಆಚರಣೆಗಳುಳ್ಳ ಆಂಟಿಡೊಂಜಿ ದಿನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಬಬಿತ ಅರಸ್ ರವರು ಆಟಿ ದಿನದ ವಿಶೇಷತೆ, ಹಿಂದಿನ ಆಟಿ ತಿಂಗಳ ಸಂಕಷ್ಟದ ದಿನಗಳ ಬಗ್ಗೆ ನೆನೆಪಿಸಿಕೊಂಡರು.
ಫ್ರೆಂಡ್ಸ್ ಗ್ರೂಪ್ ವತಿಯಿಂದ ಕಳತ್ತೂರು ರಂಗನಾಥ ಶೆಟ್ಟಿ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಶೇಖರ ಶೆಟ್ಟಿ ಕಳತ್ತೂರು, ವಾಸು ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
ಶ್ರೀಮತಿ ಸುಮನ ದೇವಾಡಿಗ ಸ್ವಾಗತಿಸಿದರು, ಶ್ರೀಮತಿ ಸುನೀತ ಶೆಟ್ಟಿ ವಂದಿಸಿದರು. ಶ್ರೀಮತಿ ಸುಪ್ರೀತ ನಿರೂಪಿಸಿದರು.












