ವಿಧಾನಸೌಧ ಆವರಣದಲ್ಲಿ ಡ್ರೋನ್ ಹಾರಿಸಿದರೇ ಪೊಲೀಸ್ ಕೇಸ್ ಎಚ್ಚರ

 

ಬೆಂಗಳೂರು : ಇವೆಂಟ್ ಮ್ಯಾನೆಜ್ಮೆಂಟ್‌ನ ಅರುಣ್ ಮತ್ತು ವಿನೋದ್ ಬಾಬು ಬಂಧಿತರು. ಖಾಸಗಿ ಕಂಪನಿಗೆ 15 ವರ್ಷ ತುಂಬಿದ ಕಾರಣಕ್ಕೆ ಅದರ ಕಾರ್ಯಕ್ರಮ ಆಯೋಜನೆಗೆ ಯುವಕರು ಗುತ್ತಿಗೆ ಪಡೆದಿದ್ದರು. ವಿಧಾನಸೌಧ ಆವರಣದಲ್ಲಿ ಅನುಮತಿ ಇಲ್ಲದೆ ಡ್ರೋನ್ ಕ್ಯಾಮರಾ ಹಾರಾಟ ನಡೆಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

 

ಈ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಲು ಅರುಣ್ ಮತ್ತು ವಿನೋದ್ ಶುಕ್ರವಾರ ಬೆಳಗ್ಗೆ 6.15ರಲ್ಲಿ ಡ್ರೋನ್‌ನೊಂದಿಗೆ ವಿಧಾನಸೌಧ ಪೂರ್ವ ಗೇಟ್ ಬಳಿ ಬಂದು ಹಾರಾಟ ನಡೆಸುತ್ತಿದ್ದರು.

 

ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಡ್ರೋನ್ ಹಾರಾಟಕ್ಕೆ ನಿರ್ಬಂಧ ಇರುವ ವಿಚಾರ ತಿಳಿಯದೆ ಹಾರಾಟ ನಡೆಸಿರುವುದಾಗಿ ಯುವಕರು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಆರೋಪದ ಮೇಲೆ ಕೇಸ್ ದಾಖಲಿಸಿ ಮುಂದೆ ತಪ್ಪು ಮಾಡದಂತೆ ಎಚ್ಚರಿಕೆ ಕೊಟ್ಟು ಠಾಣಾ ಜಾಮೀನಿನ ಮೇಲೆ ಯುವಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.ಡಾ.ಬಿ. ಆರ್.ಅಂಬೇಡ್ಕರ್ ಪ್ರತಿಮೆ ಮೇಲೆ ಡ್ರೋನ್ ಹಾರಾಟ ನಡೆಸುತ್ತಿದ್ದನು ಗಮನಿಸಿದ ಪೊಲೀಸರು, ತಕ್ಷಣ ಯುವಕರನ್ನು ಮತ್ತು ಡ್ರೋನ್ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಒಪ್ಪಿಸಿದರು.

 

.