ರಾಜ್ಯಕ್ಕೂ ವಕ್ಕರಿಸಿತು ಹೊಸ ಸ್ವರೂಪದ ಕೊರೊನಾ ಸೋಂಕು: ಕಾದಿದೆ ಭಾರಿ ಗಂಡಾಂತರ.!

ಬೆಂಗಳೂರು: ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಕ್ಕೆ ಮತ್ತೊಂದು ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

ಬೆಂಗಳೂರಿನಲ್ಲಿ ಹೊಸ ಸ್ವರೂಪದ ಕೊರೊನಾ ಸೋಂಕು (ಬ್ರಿಟನ್ ವೈರಸ್) ಕಾಣಿಸಿಕೊಂಡಿದ್ದು, ಇದು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
ಇಂಗ್ಲೆಂಡ್‌ನಿಂದ ವಾಪಸ್ ಆಗಿರುವ ಬೆಂಗಳೂರು ಮೂಲದ ಇಬ್ಬರಲ್ಲಿ ಹೈಸ್ಪೀಡ್ ಕೊರೊನಾ ವೈರಸ್ ಪತ್ತೆಯಾಗಿದೆ.

ಇದೇ ಕಾರಣದಿಂದಾಗಿ ಹೈ ಅಲರ್ಟ್ ಆಗಿರುವ ರಾಜ್ಯ ಆರೋಗ್ಯ ಇಲಾಖೆ, ಇಂಗ್ಲೆಂಡ್ ನಿಂದ ಬಂದ 138 ಮಂದಿ ಪ್ರಯಾಣಿಕರ ಪತ್ತೆಗಾಗಿ ಆಪರೇಷನ್ ಶುರು ಮಾಡಿದೆ. ಇತ್ತೀಚೆಗೆ ಯುಕೆಯಿಂದ 138 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಕೊರೊನಾ ಹೊಸ ತಳಿಯ ಪರೀಕ್ಷೆ ಮಾಡಿಸದೆ ಬೆಂಗಳೂರು ಮೂಲಕ ರಾಜ್ಯಕ್ಕೆ ಆಗಮಿಸಿರುವುದಾಗಿ ತಿಳಿದು ಬಂದಿದೆ.