ಉಡುಪಿ: ಸಂಸ್ಕೃತ ಭಾರತೀ ಉಡುಪಿ ಆಯೋಜಿಸಿದ “ಕುಟುಂಬ ಪ್ರಬೋಧನ” ಕಾರ್ಯಕ್ರಮ ಫೆ. 15 ರಂದು ತೆಂಕುಪೇಟೆಯ ಶ್ರೀ ಲಕ್ಷ್ಮೀವೇಂಕಟೇಶ ದೇವಸ್ಥಾನದ ಶ್ರೀ ಭುವನೇಂದ್ರ ಸಭಾಭವನದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರೂ, ಕುಟುಂಬ ಪ್ರಬೋಧನ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರೂ ಹಾಗೂ ನಿವೃತ್ತ ಗಣಿತ ಪ್ರಾಧ್ಯಾಪಕರೂ ಆದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಕುಟುಂಬ ಪ್ರಬೋಧನ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.
ಭಾರತೀಯ ಸಂಸ್ಕೃತಿಯ ಮಹತ್ವ, ಇದರ ರಕ್ಷಣೆಯಲ್ಲಿ ಕುಟುಂಬಗಳ ಜವಾಬ್ದಾರಿ, ಭಾರತೀಯ ಸಂಸ್ಕೃತಿಯು ಇಂದು ದುರ್ಬಲಗೊಳ್ಳುತ್ತಿರುವ ಸ್ವರೂಪ ಹಾಗೂ ಇದರಿಂದ ಕೌಟುಂಬಿಕ ಮೌಲ್ಯಗಳಲ್ಲಾಗುತ್ತಿರುವ ಶಿಥಿಲತೆ ಹಾಗೂ ಇದರ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು.
ಶ್ರೀ ವೆಂಕಟರಮಣ ದೇವಾಲಯದ ಟ್ರಸ್ಟಿ ರೋಹಿತಾಕ್ಷ ಪಡಿಯಾರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾ ಸಂಯೋಜಕ ನಟೇಶ್ ಸ್ವಾಗತಿಸಿದರು. ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀಧರ ಆಚಾರ್ಯ ಪಡುಬಿದ್ರಿ ವಂದಿಸಿದರು.
ಸಂಘದ ಅನೇಕ ಹಿರಿಯ ಸ್ವಯಂ ಸೇವಕರು ಹಾಗೂ ಸಂಸ್ಕೃತ ಭಾರತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೆಚ್ಚಿನವಿಷಯಗಳಿಗಾಗಿ ಸಂಪರ್ಕ ವಿಳಾಸ.
ನಟೇಶ್ ವೈ ಆರ್
ಜಿಲ್ಲಾ ಸಂಯೋಜಕರು
ಸಂಸ್ಕೃತಭಾರತೀ ನಗರಕಾರ್ಯಾಲಯ
ತೆಂಕುಪೇಟೆ ವೆಂಕಟರಮಣ ದೇವಸ್ಥಾನದ ಎದುರುಗಡೆ.
ಉಡುಪಿ ತಾಲೋಕು & ಜಿಲ್ಲೆ – 576101
ಮೋಬೈಲ್ : 6362835435