ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭೂರಕ್ಷಣೆ, ಮರುಭೂಮೀಕರಣ ಮತ್ತು ಬರ ಸಹಿಷ್ಣುತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜು, ಕೊಡಿಯಲ್ಬೈಲ್ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. “ ನಮ್ಮ ಭೂಮಿ ನಮ್ಮ ಭವಿಷ್ಯ” ಎಂಬ ಈ ವರ್ಷದ ಜಾಗತಿಕ ಧ್ಯೇಯವಾಕ್ಯವು ಭೂ ನಿರ್ವಹಣೆಯ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳುತ್ತದೆ. “ಜನರೇಶನ್ ರಿಸ್ಟೋರೇಶನ್” ಎನ್ನುವ ಘೋಷ ವಾಕ್ಯದ ಮುಖಾಂತರ ಪರಿಸರ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಜೀವಶಾಸ್ತ್ರವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಸಮಾಜದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ , ಅದರ ಮಹತ್ತ್ವದ ಬಗ್ಗೆ ಒತ್ತಿ ಹೇಳಿದರು. ಎಕ್ಸ್ಪರ್ಟ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ ರೀತಿ ಆ ವಿದ್ಯಾಲಯ ನೀಡುವ ಪರಿಸರ ಶಿಕ್ಷಣ ಮತ್ತು ಸಮರ್ಪಣಾ ಮನೋಭಾವವನ್ನು ಸೂಚಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶಪಾಲರಾದ ಪ್ರೋ. ರಾಮಚಂದ್ರ ಭಟ್, ಕೋಚಿಂಗ್ ಮುಖ್ಯಸ್ಥರಾದ ಕರುಣಾಕರ್ ಬಳ್ಕೂರು, ಜೀವಶಾಸ್ತ್ರ ವಿಭಾಗದ ಕೋಂಚಿಂಗ್ನ ಮುಖ್ಯಸ್ಥೆಯಾದ ಶ್ರೀಮತಿ ಲಲಿತಾ ಮಲ್ಯ ಹಾಗೂ ಜೀವಶಾಸ್ತ್ರ ವಿಭಾಗದ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.