ಅಮಾಸೆಬೈಲು: ಪೋಕ್ಸೋ ಪ್ರಕರಣ – ಆರೋಪಿಗೆ ಜೂ.21ರ ತನಕ ನ್ಯಾಯಾಂಗ ಬಂಧನ

ಅಮಾಸೆಬೈಲು: ಪೋಕ್ಸೋ ಪ್ರಕರಣದ ಆರೋಪಿ ಶಂಕರನಾರಾಯಣ ಗ್ರಾಮದ ಶ್ರೇಯಾ ನಾಯ್ಕನನ್ನು ಪೊಲೀಸರು ಶುಕ್ರವಾರ ಸಿದ್ದಾಪುರದಲ್ಲಿ ಬಂದಿಸಿದ್ದಾರೆ. ಆರೋಪಿ ಶ್ರೇಯಾ ನಾಯ್ಕ ವಿರುದ್ಧ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಮೇ18ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿಯು ತಲೆ ಮರೆಸಿಕೊಂಡಿದ್ದು, ಪೊಲೀಸರು ತಂಡ ರಚಿಸಿಕೊಂಡು ಆರೋಪಿಗಾಗಿ ಬಲೆ ಬಿಸಿದರು. ಶಿವಮೊಗ್ಗದಿಂದ ಬಸ್‌ನಲ್ಲಿ ಬರುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಿದ್ದಾಪುರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯವು ಜೂ.21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಏನಿದು […]

ಮಂಗಳೂರು: ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ.

ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭೂರಕ್ಷಣೆ, ಮರುಭೂಮೀಕರಣ ಮತ್ತು ಬರ ಸಹಿಷ್ಣುತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜು, ಕೊಡಿಯಲ್‍ಬೈಲ್ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. “ ನಮ್ಮ ಭೂಮಿ ನಮ್ಮ ಭವಿಷ್ಯ” ಎಂಬ ಈ ವರ್ಷದ ಜಾಗತಿಕ ಧ್ಯೇಯವಾಕ್ಯವು ಭೂ ನಿರ್ವಹಣೆಯ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳುತ್ತದೆ. “ಜನರೇಶನ್ ರಿಸ್ಟೋರೇಶನ್” ಎನ್ನುವ ಘೋಷ ವಾಕ್ಯದ ಮುಖಾಂತರ ಪರಿಸರ ದಿನವನ್ನು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಜೀವಶಾಸ್ತ್ರವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಸಮಾಜದಲ್ಲಿ […]

ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್’ಗೆ ಪ್ರವೇಶಾರಂಭ.

ಉಡುಪಿ/ಮಣಿಪಾಲ: ಕಳೆದ 12 ವರ್ಷಗಳಿಂದ ‘ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ ಮಹಿಳೆಯರಿಗೆ ಒಂದು ವರ್ಷದ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ನಡೆಸುತ್ತಿದೆ. ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜ್‍ದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಆಸಕ್ತರು ಸಂಸ್ಥೆಯಿಂದ ಅರ್ಜಿ ನಮೂನೆ ಪಡೆದು ಶ್ರೀ ಶಾರದಾ ಟೀಚರ್ ಟ್ರೈನಿಂಗ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ […]

ಕಾಪು ಬೀಚಿನಲ್ಲಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪಡುಕೆರೆ ಸಮುದ್ರದಲ್ಲಿ ಪತ್ತೆ.

ಉಡುಪಿ: ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌, ಪರ್ಸ್ ಇಟ್ಟು ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆ ವೇಳೆ ಪತ್ತೆಯಾಗಿದೆ.ಮೃತ ಯುವಕನನ್ನು ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಮನೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ಅವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ಕಾಣೆಯಾದ ಬಗ್ಗೆ ತಂದೆ ತುಳಸಿ ಸಾಲ್ಯಾನ್‌ರವರು […]

ತ್ರಿಶಾ ವಿದ್ಯಾ ಪಿಯು ಕಾಲೇಜು: ವಿಶ್ವ ಪರಿಸರ ದಿನಾಚರಣೆ.

ಉಡುಪಿ: ಪ್ರಸ್ತುತ ದಿನಮಾನದಲ್ಲಿ ಹಾಳಾಗುತ್ತಿರುವ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ. ನಮ್ಮ ಮುಂದಿನ ಜನಾಂಗಕ್ಕೂ ಪರಿಸರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಈ ಪರಿಸರವನ್ನು ಉಳಿಸುವ ಯೋಚನೆಯನ್ನು ಮಾಡಲೇಬೇಕು ಎಂದು ಇತ್ತೀಚಿಗೆ ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜೆಸಿಐ ಕಟಪಾಡಿಯ ಅಧ್ಯಕ್ಷರಾದ ಪ್ರಶಾಂತ್ ಆರ್ ಎಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಇವರು ಜಾಗತಿಕ ತಾಪಮಾನ […]