ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿಲಾಷೆಗೆ ನೀರೆರೆದು ಪೋಷಿಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟು ಮುಂದೆ ಸಾಗುತ್ತ ಮಣಿಪಾಲದ ವಿದ್ಯಾನಗರದಲ್ಲಿ “ಮಣಿಪಾಲ ಜ್ಞಾನಸುಧಾ” ಎಂಬ ನಾಮಾಂಕಿತದ ನೂತನ ಪದವಿಪೂರ್ವ ಕಾಲೇಜನ್ನು ಆರಂಭಿಸಿದ್ದು 2024-25ನೇ ಶೈಕ್ಷಣಿಕ ವರ್ಷದಿಂದ ಕಾರ್ಯನಿರ್ವಹಿಸಲಿದೆ.
ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಲ್ಪಡುವ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಮತ್ತು ಶೇ 50 ಶುಲ್ಕ ವಿನಾಯಿತಿಯೊಂದಿಗೆ ಶಿಕ್ಷಣವನ್ನು ನೀಡಲಿದ್ದು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಸಿ., ವಾಣಿಜ್ಯ ವಿಭಾಗದಲ್ಲಿ ಬಿಸಿನೆಸ್ ಸ್ಟಡೀಸ್, ಎಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ (BASC) ಸಂಯೋಜನೆಯಿದೆ. ದಾಖಲಾತಿ ಬಯಸುವ ವಿದ್ಯಾರ್ಥಿಗಳು ಹತ್ತನೇ ತರಗತಿಯ ಸಿ.ಬಿ.ಎಸ್.ಇ./ಐ.ಸಿ.ಎಸ್.ಇ. ಬೋರ್ಡ್ನಲ್ಲಿ ಶೇ 90 ಕ್ಕಿಂತ ಅಧಿಕ ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸಿದ್ದರೆ ಈ ಉಚಿತ ಶಿಕ್ಷಣದ ಸದುಪಯೋಗ ಪಡಿಸಿಕೊಳ್ಳಬಹುದು.
ಕುಂದಾಪುರ, ಮುಲ್ಕಿ, ಪೆರ್ಡೂರು ಕಡೆಯಿಂದ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ಬಸ್ನ ವ್ಯವಸ್ಥೆಯಿದೆ. ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಮೊ:8686190505