ಭಾರತ v/s ಇಂಗ್ಲೆಂಡ್ ಟೆಸ್ಟ್: 4-1 ಅಂತರದಿಂದ ಸರಣಿ ಗೆದ್ದ ಭಾರತ

ಧರ್ಮಶಾಲಾ: ಸ್ಪಿನ್ನರ್‌ಗಳ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್‌ ಪಂದ್ಯವನ್ನು(Test Match) ಭಾರತ (Team India) ಒಂದು ಇನ್ನಿಂಗ್ಸ್‌ ಮತ್ತು 64 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

259 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 195 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಪಿನ್ನರ್‌ ಅಶ್ವಿನ್‌ 5 ವಿಕೆಟ್‌ ಪಡೆದರೆ ಬುಮ್ರಾ ಮತ್ತು ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಪಡೆದರು. ರವೀಂದ್ರ ಜಡೇಜಾ 1 ವಿಕೆಟ್‌ ಕಿತ್ತರು.

ಇಂಗ್ಲೆಂಡ್‌ ಪರ ಜೋ ರೂಟ್‌ 84 ರನ್‌(128 ಎಸೆತ, 12 ಬೌಂಡರಿ), ಜಾನಿ ಬೈರ್ಸ್ಟೋವ್ 39 ರನ್‌, ಟಾಮ್‌ ಹಾರ್ಟ್ಲಿ 20 ರನ್‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಈ ಸರಣಿಯಲ್ಲಿ ಭಾರತ ಅತ್ಯತ್ತಮ ಸಾಧನೆ ಮಾಡಿದೆ. ಕೊಹ್ಲಿ ಮತ್ತು ಶಮಿ ಪಂದ್ಯದಿಂದ ಹೊರಗುಳಿದಿದ್ದರು. ಕೆಎಲ್‌ ರಾಹುಲ್‌ ಮೊದಲ 4 ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದರು. ಜಡೇಜಾ 2ನೇ ಟೆಸ್ಟ್‌ ಆಡಲಿಲ್ಲ. 4ನೇ ಟೆಸ್ಟ್‌ನಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು.

ಮೂರರಿಂದ ಐದನೇ ಕ್ರಮಾಂಕದವರೆಗೆ ಅನುನುಭವಿ ಆಟಗಾರರು ಇದ್ದರೂ ಭಾರತ 4 ಪಂದ್ಯಗಳನ್ನು ಗೆದ್ದುಕೊಂಡಿದೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ತಂಡ ಉತ್ತಮ ಸಾಧನೆ ಮಾಡಿದೆ.