ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಹೊಸ ಚಿತ್ರ ಬಿಡುಗಡೆ: ಪತ್ತೆ ಹಚ್ಚಲು ನಾಗರಿಕರ ಸಹಕಾರ ಕೋರಿದ ತನಿಖಾ ಸಂಸ್ಥೆ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwarma Cafe Blast) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಅಪರಾಧಕ್ಕೆ ಸಂಬಂಧಿಸಿದ ಶಂಕಿತನ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದೆ ಮತ್ತು ಆತನನ್ನು ಪತ್ತೆಹಚ್ಚಲು ಸಾರ್ವಜನಿಕ ಸಹಕಾರವನ್ನು ಕೋರಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

“ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಶಂಕಿತನನ್ನು ಗುರುತಿಸಲುೀನ್.ಐ.ಎ ನಾಗರಿಕರ ಸಹಕಾರವನ್ನು ಕೋರಿದೆ. ಯಾವುದೇ ಮಾಹಿತಿಯೊಂದಿಗೆ 08029510900, 8904241100 ಕರೆ ಮಾಡಿ ಅಥವಾ[email protected] ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಇಡಲಾಗುವುದು” ಎಂದು ತನಿಖಾ ಸಂಸ್ಥೆ ಪೋಸ್ಟ್ ಮಾಡಿದೆ.

ಚಿತ್ರಗಳಲ್ಲಿನ ಶಂಕಿತ ವ್ಯಕ್ತಿ ಎತ್ತರವಾಗಿ ಕಾಣುತ್ತಾನೆ, ಟಿ-ಶರ್ಟ್ ಧರಿಸಿದ್ದಾನೆ ಮತ್ತು ಅವನ ಮುಖವನ್ನು ಮಾಸ್ಕ್ ನಿಂದ ಮುಚ್ಚಿದ್ದಾನೆ. ಎನ್‌ಐಎ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ಆತ ಬ್ಯಾಗ್ ಒಂದನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ. ಈತನ ಮಾಹಿತಿ ನೀಡಿದವರಿಗೆ ಎನ್ ಐಎ ಈಗಾಗಲೇ 10 ಲಕ್ಷ ರೂ ಬಹುಮಾನ ಘೋಷಿಸಿದೆ.