ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್” ಕುರಿತು ಉಪನ್ಯಾಸ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು
ಸಂಸ್ಥೆಯ ಐಎಸ್‌ಟಿಇ ವಿದ್ಯಾರ್ಥಿ ಘಟಕ, ಐಇಇಇ ವಿದ್ಯಾರ್ಥಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ, ಸಹ ಪಠ್ಯೇತರ ಘಟಕದ ಸಹಯೋಗದೊಂದಿಗೆ “ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.

ಇನ್ಫೋಸಿಸ್ ಲಿಮಿಟೆಡ್ ನ ಐಶ್ವರ್ಯ ರಾಜೀವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಇನ್ಫೋಸಿಸ್
ಸ್ಪ್ರಿಂಗ್ ಬೋರ್ಡ್ಗಳಲ್ಲಿ ಒದಗಿಸಲಾದ ವಿವಿಧ ಕೋರ್ಸ್ ಗಳಿಗೆ ನೋಂದಾಯಿಸಿಕೊಳ್ಳುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಇಂತಹ ಕೋರ್ಸ್ ಗಳಿಂದ ಪಡೆದ ಪ್ರಯೋಜನಗಳ ಬಗ್ಗೆ ವಿವರಿಸಿದರು ಹಾಗೂ ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್ ತರಬೇತಿಯ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು.
ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ
ಎಂದರು.

ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿದರು, ಗಣಕಯಂತ್ರ ವಿಭಾಗದ
ಮುಖ್ಯಸ್ಥ ಡಾ. ಸೌಮ್ಯ ಜೆ ಭಟ್ ವಂದಿಸಿದರು, ವಿದ್ಯಾರ್ಥಿನಿ ನತಾಶ ಲೋಬೊ ನಿರೂಪಿಸಿದರು.
ಹಾಗೂ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿಯರಾದ ರೇಶ್ಮಾ ಮತ್ತು ಚೈತ್ರಾ
ಕಾರ್ಯಕ್ರಮ ಸಂಯೋಜಿಸಿದರು.