ಉಡುಪಿ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟ್ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಭೇಟಿ

ಭಾರತ ತಂಡದ ಮಾಜಿ ಕ್ರಿಕೇಟ್ ಆಟಗಾರರಾದ ಕೃಷ್ಣಮಾಚಾರಿ ಶ್ರೀ ಕಾಂತ್ ಹಾಗೂ ಪತ್ನಿ ಕೃಷ್ಣಮಠಕ್ಕೆ ಆಗಮಿಸಿದ್ದರು. ಶ್ರೀ ಕೃಷ್ಣ, ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಉತ್ತೇಜನ: 13,375 ಕೋಟಿ ರೂ ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ; ಹಲವು ಐಐಟಿಗಳ ಸ್ಥಾಪನೆ

ನವದೆಹಲಿ: 13,375 ಕೋಟಿ ರೂಪಾಯಿ ಮೊತ್ತದ ಹಲವು ಬೃಹತ್ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ದೇಶಾದ್ಯಂತ ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ, ದೇಶದಲ್ಲಿ ಮೂರು ಹೊಸ ವಿದ್ಯಾಸಂಸ್ಥೆಗಳಾದ ಐಐಎಂ ಜಮ್ಮು, ಐಐಎಂ ಬೋಧಗಯಾ ಮತ್ತು ಐಐಎಂ ವಿಶಾಖಪಟ್ಟಣಂ ಅನ್ನು ಉದ್ಘಾಟಿಸಲಿದ್ದಾರೆ. ಇತರ ಯೋಜನೆಗಳಲ್ಲಿ ಐಐಟಿ ಭಿಲಾಯಿ, ಐಐಟಿ ತಿರುಪತಿ, ಐಐಟಿ ಜಮ್ಮು, ಐಐಐಟಿಡಿಎಂ ಕಾಂಚೀಪುರಂನ ಶಾಶ್ವತ ಕ್ಯಾಂಪಸ್‌ಗಳ ಪ್ರಾರಂಭ; ಇಂಡಿಯನ್ ಇನ್‌ಸ್ಟಿಟ್ಯೂಟ್ […]

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್” ಕುರಿತು ಉಪನ್ಯಾಸ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವುಸಂಸ್ಥೆಯ ಐಎಸ್‌ಟಿಇ ವಿದ್ಯಾರ್ಥಿ ಘಟಕ, ಐಇಇಇ ವಿದ್ಯಾರ್ಥಿ ಘಟಕ, ಉದ್ಯೋಗ ಮತ್ತು ತರಬೇತಿ ಘಟಕ, ಸಹ ಪಠ್ಯೇತರ ಘಟಕದ ಸಹಯೋಗದೊಂದಿಗೆ “ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು. ಇನ್ಫೋಸಿಸ್ ಲಿಮಿಟೆಡ್ ನ ಐಶ್ವರ್ಯ ರಾಜೀವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಇನ್ಫೋಸಿಸ್ಸ್ಪ್ರಿಂಗ್ ಬೋರ್ಡ್ಗಳಲ್ಲಿ ಒದಗಿಸಲಾದ ವಿವಿಧ ಕೋರ್ಸ್ ಗಳಿಗೆ ನೋಂದಾಯಿಸಿಕೊಳ್ಳುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅವರು ತಮ್ಮ ವೃತ್ತಿ ಜೀವನದಲ್ಲಿ […]

ಕುಂದಾಪುರ: ಪಿ.ಯು.ಸಿ.ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಿದ್ದಾಪುರದ ಜನ್ಸಾಲೆಯ ಶೋಭಿತ್ ನಿಗೆ ಪ್ರೋತ್ಸಾಹ ಧನ ವಿತರಣೆ.

ಹೆಮ್ಮಾಡಿ: ಪ್ರಥಮ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಜನ್ಸಾಲೆಯ ಶೋಭಿತ್ ತೀರ ಬಡತನ ಕುಟುಂಬದ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹೆಮ್ಮಾಡಿಯ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ಟ್ರಸ್ಟ್‌ ನ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು ಹಾಗೂ ವಿದ್ಯಾರ್ಥಿಯ ಪಿ.ಯು.ಸಿ ವ್ಯಾಸಂಗದ ಕುರಿತು ಶುಭಹಾರೈಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

365 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳದೊಂದಿಗೆ ಪಾಕಿಸ್ತಾನದ ಸಂಪೂರ್ಣ ಆರ್ಥಿಕತೆಗಿಂತ ದೊಡ್ಡದಾಗಿ ಬೆಳೆದು ನಿಂತ ಟಾಟಾ ಗ್ರೂಪ್

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಹಲವಾರು ಟಾಟಾ ಗ್ರೂಪ್ ಕಂಪನಿಗಳು ಹೆಚ್ಚಿನ ಆದಾಯವನ್ನು ನೀಡುವುದರೊಂದಿಗೆ, ಉಪ್ಪಿನಿಂದ ಸಾಫ್ಟ್‌ವೇರ್ ವರೆಗಿನ ಟಾಟಾ ಕಂಪನಿಗಳ ಸಮೂಹ ಮಾರುಕಟ್ಟೆ ಮೌಲ್ಯವು ನೆರೆಯ ಪಾಕಿಸ್ತಾನದ ಸಂಪೂರ್ಣ ಆರ್ಥಿಕತೆಯನ್ನು ಮೀರಿಸುವಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಕೊನೆಯ ಎಣಿಕೆಯಲ್ಲಿ, ಭಾರತದ ಅತಿದೊಡ್ಡ ವ್ಯಾಪಾರ ಸಂಸ್ಥೆಯ(TATA Group) ಮಾರುಕಟ್ಟೆ ಬಂಡವಾಳೀಕರಣವು $365 ಶತಕೋಟಿ ಅಥವಾ ರೂ. 30.3 ಲಕ್ಷ ಕೋಟಿಯಷ್ಟಿದ್ದರೆ, IMF ಪ್ರಕಾರ ಪಾಕಿಸ್ತಾನದ ಜಿಡಿಪಿ ಸುಮಾರು $341 ಬಿಲಿಯನ್ ಎಂದು […]