ಮಂದರ್ತಿ: ಇಲ್ಲಿನ ಇತಿಹಾಸ ಪ್ರಸಿದ್ದ ಮಂದರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮನ್ಮಹಾರಥೋತ್ಸವವು ಫೆ.10 ರಿಂದ 16 ರವರೆಗೆ ಜರುಗಲಿದೆ.
ಫೆ 10- ಬೆಳಿಗ್ಗೆ 9 ಗಂಟೆಗೆ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ
ರಾತ್ರಿ 8 ರಿಂದ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ
ಫೆ.11- ಬೆಳಿಗ್ಗೆ 8 ರಿಂದ ವಿಶೇಷ ಪೂಜೆ, ರಂಗಪೂಜೆ, ಕಟ್ಟೆಪೂಜೆ
ಫೆ.12- ರಾತ್ರಿ 8 ರಿಂದ ರಂಗಪೂಜೆ, ಕಟ್ಟೆಪೂಜೆ, ವಸಂತಪೂಜೆ
ಫೆ-13 – ಕುಂಭ ಸಂಕ್ರಮಣ
ರಾತ್ರಿ 9 ರಿಂದ ಕೆಂಡಸೇವೆ
ರಾತ್ರಿ 3 ರಿಂದ ಹಾಲಿಟ್ಟು ಸೇವೆ, ನಾಗದರ್ಶನ
ರಾತ್ರಿ 4 ರಿಂದ ಹಿರೇ ರಂಗಪೂಜೆ, ಬಲಿಉತ್ಸವ, ಡಕ್ಕೆ ಬಲಿ
ಫೆ-14 – ಮಧ್ಯಾಹ್ನ 12.30 ರಿಂದ ಶ್ರೀ ಮನ್ಮಹಾರಥಾರೋಹಣ
ಸಂಜೆ 6 ರಿಂದ ರಥೋತ್ಸವ
ರಾತ್ರಿ 8 ರಿಂದ ಓಲಗ ಮಂಟಪ ಪೂಜೆ, ಶಯನೋತ್ಸವ, ಕವಾಟ ಬಂಧನ
ಫೆ-15- ಬೆಳಿಗ್ಗೆ 8 ರಿಂದ ಕವಾಟ ವಿಸರ್ಜನೆ, ಲಕ್ಷ್ಮೀ ಮಂಟಪ ಪೂಜೆ
ರಾತ್ರಿ 8 ರಿಂದ ದೀಪೋತ್ಸವ, ರಂಗಪೂಜೆ, ಪಲ್ಲಕ್ಕಿ ಉತ್ಸವ, ಸುರ್ಗಿಕಟ್ಟೆ ಪೂಜೆ, ಬೀದಿ ಮತ್ತು ಕೆರೆ ದೀಪೋತ್ಸವ, ಓಲಗ ಮಂಟಪ ಪೂಜೆ, ಅಷ್ಠಾವಧಾನ ಸೇವೆ
ಬಳಿಕ ಐದು ಮೇಳ್ದವರಿಂದ ಯಕ್ಷಗಾನ ಸೇವೆ ಆಟ
ಫೆ-16- ಸಂಪ್ರೋಕ್ಷಣೆ
ಶ್ರೀ ಕ್ಷೇತ್ರದ ನೂತನ ಬೆಳ್ಳಿ ರಥದಲ್ಲಿ ಭಕ್ತಾದಿಗಳಿಗೆ ಹೊಸದಾಗಿ ರಂಗಪೂಜೆಯೊಂದಿಗೆ ಬೆಳ್ಳಿ ರಥೋತ್ಸವ ಸೇವೆಗೆ ಅವಕಾಶವಿದೆ.
ದಿನಾಂಕ: 4-4-2024 ಗುರುವಾರದಂದು ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.