ಲಕ್ನೋ: ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ಸೋಮವಾರ 2024-25 ರ ಆರ್ಥಿಕ ವರ್ಷಕ್ಕೆ ರಾಜ್ಯ ವಿಧಾನಸಭೆಯಲ್ಲಿ 7.36 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದರು.
ಮುಂದಿನ ಹಣಕಾಸು ವರ್ಷಕ್ಕೆ 7,36,437.71 ಕೋಟಿ ರೂ.ಗಳ ಒಟ್ಟು ವೆಚ್ಚವು 24,863.57 ಕೋಟಿ ರೂಪಾಯಿಗಳ ಹೊಸ ಯೋಜನೆಗಳನ್ನು ಒಳಗೊಂಡಿದೆ ಎಂದು ರಾಜ್ಯ ಹಣಕಾಸು ಸಚಿವರು ಬಜೆಟ್ ಮಂಡಿಸುವಾಗ ಹೇಳಿದರು.
ಮುಂದಿನ ಹಣಕಾಸು ವರ್ಷಕ್ಕೆ ಉತ್ತರ ಪ್ರದೇಶ ಸರ್ಕಾರದ ವಾರ್ಷಿಕ ಬಜೆಟ್ ರಾಜ್ಯದಲ್ಲಿ ಕೃಷಿ ವಲಯಕ್ಕೆ 5.1 ರಷ್ಟು ಬೆಳವಣಿಗೆ ದರದ ಗುರಿಯನ್ನು ಹೊಂದಿದೆ.
ಬಜೆಟ್ನಲ್ಲಿ ಕೃಷಿ ಸಂಬಂಧಿತ ಮೂರು ಹೊಸ ಯೋಜನೆಗಳಿಗೆ 460 ಕೋಟಿ ರೂ. ನೀಡಲಾಗಿದೆ. 50 ಕೋಟಿ ಅನುದಾನದಲ್ಲಿ ಮುಖ್ಯಮಂತ್ರಿ ಖೇತ್ ಸುರಕ್ಷಾ ಯೋಜನೆ (ಕೃಷಿ ಸುರಕ್ಷಾ ಯೋಜನೆ)ಯನ್ನೂ ಆರಂಭಿಸಲಾಗುವುದು.
ನಿರ್ಗತಿಕ ಮಹಿಳಾ ಪಿಂಚಣಿ ಯೋಜನೆಯಡಿ, ಅರ್ಹ ಫಲಾನುಭವಿಗಳಿಗೆ ಪಾವತಿಸಬೇಕಾದ ಮೊತ್ತವನ್ನು ತಿಂಗಳಿಗೆ 500 ರೂ.ನಿಂದ 1,000 ರೂ.ಗೆ ಹೆಚ್ಚಿಸಲಾಗಿದೆ.
ಮಹಿಳಾ ರೈತ ಸಬಲೀಕರಣ ಯೋಜನೆಯಡಿ, 2024-2025ರ ಆರ್ಥಿಕ ವರ್ಷದಲ್ಲಿ 200 ಉತ್ಪಾದಕ ಗುಂಪುಗಳನ್ನು ರಚಿಸುವ ಮೂಲಕ ತಾಂತ್ರಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ರಾಜ್ಯ ಸರ್ಕಾರವು ದೆಹಲಿಯ ಮಾದರಿಯಲ್ಲಿ ಲಕ್ನೋದಲ್ಲಿ ಏರೋ ಸಿಟಿಯನ್ನು ಯೋಜಿಸುತ್ತಿ ಸುಮಾರು 1500 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು 7-ಸ್ಟಾರ್ ಹೋಟೆಲ್, ಪಾರ್ಕ್, ವಿಶ್ವ ದರ್ಜೆಯ ಕನ್ವೆನ್ಷನ್ ಸೆಂಟರ್ಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿರುತ್ತದೆ.
ಯುವಕರಿಗೆ ಉಚಿತ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ವಿತರಣೆಗೆ 4000 ಕೋಟಿ,
ಗಂಗಾ ಎಕ್ಸ್ಪ್ರೆಸ್ವೇ ಯೋಜನೆಗೆ 2057 ಕೋಟಿ, 2025 ರಲ್ಲಿ ಮಹಾ ಕುಂಭಮೇಳದ ಸಿದ್ಧತೆಗಾಗಿ 2500 ಕೋಟಿ, ಅಯೋಧ್ಯೆಯ ಸರ್ವಾಂಗೀಣ ಅಭಿವೃದ್ಧಿಗೆ 100 ಕೋಟಿ, ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆಗೆ 150 ಕೋಟಿ, ಧಾರ್ಮಿಕ ಸ್ಥಳಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿಗೆ 1750 ಕೋಟಿ,ಜೇವರ್, ಗೌತಮ್ ಬುದ್ ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ 1150 ಕೋಟಿ, ವಾರಣಾಸಿಯಲ್ಲಿ NIFT ಸ್ಥಾಪನೆಗೆ 150 ಕೋಟಿ, ಲಕ್ನೋ-ಹರ್ದೋಯ್ನಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಮತ್ತು ಅಪಾರಲ್ ಪಾರ್ಕ್ಗೆ 200 ಕೋಟಿ ನೀಡಲಾಗಿದೆ.