ಕಾಪು: ವ್ಯಕ್ತಿ ನಾಪತ್ತೆ  

ಉಡುಪಿ: ಕಾಪು ತಾಲೂಕು ಮಟ್ಟು ಗ್ರಾಮದ ಕಟಪಾಡಿ ನಿವಾಸಿ ಶ್ರೀನಿವಾಸ ಸಾಲ್ಯಾನ್ (45) ಎಂಬ ವ್ಯಕ್ತಿಯು ಜನವರಿ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.    5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಪೊಲೀಸ್ […]

1991 ರ ಪೂಜಾ ಸ್ಥಳ ಕಾನೂನನ್ನು ರದ್ದುಗೊಳಿಸಿ: ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಒತ್ತಾಯ

ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಂಸದ ಹರನಾಥ್ ಸಿಂಗ್ ಯಾದವ್ ಸೋಮವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಪೂಜಾ ಸ್ಥಳಗಳ ಕಾಯ್ದೆ, 1991 ರ(Places Of Worship Act) ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಕಾನೂನನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. 1991 ರ ಕಾಯಿದೆಯು ಭಗವಾನ್ ರಾಮ ಮತ್ತು ಕೃಷ್ಣ ದೇವರ ನಡುವೆ ವ್ಯತ್ಯಾಸವನ್ನು ಸೃಷ್ಟಿಸುತ್ತದೆ, ಇಬ್ಬರೂ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ ಮತ್ತು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರ ಧಾರ್ಮಿಕ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸಿದರು. ಕಾನೂನನ್ನು […]

7.36 ಲಕ್ಷ ಕೋಟಿ ರೂಗಳ ಬಜೆಟ್ ಅನಾವರಣಗೊಳಿಸಿದ ಯೋಗಿ ಸರ್ಕಾರ: ಕೃಷಿ, ಮಹಿಳೆಯರು ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಒತ್ತು

ಲಕ್ನೋ: ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ಸೋಮವಾರ 2024-25 ರ ಆರ್ಥಿಕ ವರ್ಷಕ್ಕೆ ರಾಜ್ಯ ವಿಧಾನಸಭೆಯಲ್ಲಿ 7.36 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಮಂಡಿಸಿದರು. ಮುಂದಿನ ಹಣಕಾಸು ವರ್ಷಕ್ಕೆ 7,36,437.71 ಕೋಟಿ ರೂ.ಗಳ ಒಟ್ಟು ವೆಚ್ಚವು 24,863.57 ಕೋಟಿ ರೂಪಾಯಿಗಳ ಹೊಸ ಯೋಜನೆಗಳನ್ನು ಒಳಗೊಂಡಿದೆ ಎಂದು ರಾಜ್ಯ ಹಣಕಾಸು ಸಚಿವರು ಬಜೆಟ್ ಮಂಡಿಸುವಾಗ ಹೇಳಿದರು. ಮುಂದಿನ ಹಣಕಾಸು ವರ್ಷಕ್ಕೆ ಉತ್ತರ ಪ್ರದೇಶ ಸರ್ಕಾರದ ವಾರ್ಷಿಕ ಬಜೆಟ್ ರಾಜ್ಯದಲ್ಲಿ ಕೃಷಿ ವಲಯಕ್ಕೆ 5.1 […]

ತ್ರಿಶಾ ಕ್ಲಾಸಸ್ : ಸಿ.ಎಸ್.ಇ.ಇ.ಟಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಕಟಪಾಡಿ: ಐ.ಸಿ.ಎಸ್.ಐ( ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ) ನಡೆಸುವ ಸಿ.ಎಸ್ (ಕಂಪನಿ ಸೆಕ್ರೆಟರಿ) ಕೋರ್ಸ್ ನ ಮೊದಲ ಹಂತವಾದ ಸಿ.ಎಸ್.ಇ.ಇ.ಟಿ, ಜನವರಿ 2024 ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತ್ರಿಶಾ ಕ್ಲಾಸಸ್ ವತಿಯಿಂದ ಸನ್ಮಾನ ಕಾರ್ಯಕ್ರಮವು ಜ. 29 ರಂದು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಿತು. ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಹೆತ್ತವರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಗುರುಪ್ರಸಾದ್ ರಾವ್ ಅವರು ಮುಂದಿನ ಹಂತವಾದ ಸಿ.ಎಸ್ […]

ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ

ಮಣಿಪಾಲ: ಕ್ರಾಫ್ಟ್ಸ್ ಮಂತ್ರಾದಲ್ಲಿ ಆಫೀಸ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು ಗ್ರಾಫಿಕ್ ಡಿಸೈನಿಂಗ್ ಸ್ಟೋರ್ ಮ್ಯಾನೇಜ್ಮೆಂಟ್ ಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕೆಲಸದ ಸಮಯ: 10 ರಿಂದ 6ಸ್ಥಳ: ಪ್ರಗತಿ ಬಿಸಿನೆಸ್ ಡಿಸ್ಟ್ರಿಕ್ಟ್ನೆಲಮಹಡಿ ಶಾಪ್ ನಂ 1, ಟ್ರೆಂಡ್ಸ್ ಕೆಳಗಡೆ, ಲಕ್ಷ್ಮೀಂದ್ರ ನಗರ ಮಣಿಪಾಲ ಆಸಕ್ತರು ರೆಸ್ಯೂಮ್ ಅನ್ನು craftsmantrastore@gmail.com ಗೆ ಕಳುಹಿಸಿ ಸಂಪರ್ಕ: 6362571412