ಉಡುಪಿ: ಪೆರ್ಡೂರು ಸಮೀಪದ ಬೈರಂಪಳ್ಳಿ ದೂಪದಕಟ್ಟೆ ಹುಣ್ಸೆ ಬಾಕೇರ್ ನಿವಾಸಿ, ಬಸ್ ಕಂಡಕ್ಟರ್ ಪ್ರಶಾಂತ್ ಪೂಜಾರಿ (38) ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅಲಂಗಾರು ಗರಡಿ ಸಮೀಪದ ನಿವಾಸಿ ಸಚಿನ್ ನಾಯ್ಕ (24) ಎಂಬಾತನನ್ನು ಹಿರಿಯಡಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್ನಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ.
ಜುಲೈ.11ರಂದು ಮಧ್ಯರಾತ್ರಿ ಮನೆಯ ಆವರಣದಲ್ಲಿ ಕತ್ತಿಯಿಂದ ಕಡಿದು ಪ್ರಶಾಂತ್ ಪೂಜಾರಿ ಅವರನ್ನು ಕೊಲೆ ಮಾಡಲಾಗಿತ್ತು.
ಪ್ರಕರಣದ ಬಂಧಿತ ಆರೋಪಿ ಕುಕ್ಕೆಹಳ್ಳಿ ಬುಕ್ಕಿಗುಡ್ಡೆ ನಿವಾಸಿ ರಕ್ಷಕ್ (19) ಎಂಬಾತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿ ಸಚಿನ್ ನಾಯ್ಕ ನನ್ನು ನ್ಯಾಯಾಲಯವು 4 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸ್ ಇಲಾಖೆ ಪ್ರಕಟನೆ ತಿಳಿಸಿದೆ.