ಉಡುಪಿ: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಜು.24ರಂದು ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಲಾತೂರು ಜಿಲ್ಲೆಯ ಅವಿನಾಶ್ ದಿಗಂಬರ್ ಲೋಖಂಡೆ(28) ಬಂಧಿತ ಆರೋಪಿ. ಈತನಿಂದ 40ಸಾವಿರ ರೂ. ವೌಲ್ಯದ 2.40ಕೆ.ಜಿ. ಗಾಂಜಾ ಮತ್ತು 5000ರೂ. ವೌಲ್ಯದ ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗ ದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಪಿ., ಎಸ್ಸೈ ಲಕ್ಷ್ಮಣ, ಸಿಬ್ಬಂದಿ ರಾಘವೇಂದ್ರ, ಕೃಷ್ಣ ಪ್ರಸಾದ್, ಸಂಜಯ್, ನಾಗೇಶ್, ಪ್ರವೀಣ್ ಈ ಕಾರ್ಯಾಚರಣೆ ನಡೆಸಿದ್ದಾರೆ.