ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರದ ಅನಾವರಣ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಅಪಾರ ಸಂತೋಷ ಮತ್ತು ಭಕ್ತಿಯಿಂದ ಸ್ವಾಗತಿಸಲು ಜನವರಿ 22 ಸಿದ್ಧವಾಗಿದೆ.
ದೇವಾಲಯಗಳ ಊರೆಂದೇ ಪ್ರಸಿದ್ಧಿಯಾಗಿರುವ ಉಡುಪಿ ಭಕ್ತಿ, ಕಲೆ ಹಾಗೂ ಸಂಸ್ಕೃತಿಯ ನೆಲೆಬೀಡಾಗಿದೆ.
ಉಡುಪಿಯ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಶಶಾಂಕ್ ಪೈ ಅವರು ಭಗವಾನ್ ಶ್ರೀ ರಾಮಚಂದ್ರನ ಪಟ್ಟಾಭಿಷೇಕವನ್ನು ಸ್ಪಷ್ಟವಾಗಿ ವರ್ಣಿಸಿರುವ ಭಾವಚಿತ್ರವನ್ನು “ರಾಮ” ಎಂಬ ಪವಿತ್ರ ಪದವನ್ನು 21,008 ಬಾರಿ ಬರೆಯುವ ಮೂಲಕ ಈ ಕಲಾಕೃತಿಯನ್ನು ರಚಿಸಿರುತ್ತಾರೆ.
ಶ್ರೀರಾಮಚಂದ್ರ ಹಾಗೂ ಅವರ ಪತ್ನಿ ಸೀತಾದೇವಿ, ಸಹೋದರ ಲಕ್ಷ್ಮಣ ಮತ್ತು ಭಕ್ತ ಹನುಮನ ಭಾವಚಿತ್ರದ ಪ್ರತಿ ಸಾಲು, ರೇಖೆ, ಬೆಲೆಬಾಳುವ ಆಭರಣಗಳು, ದೇಹದ ಬಣ್ಣಗಳು, ಆಯುಧಗಳು ಮತ್ತು ಸಭೆಯ ಪೂರ್ಣಚಿತ್ರವನ್ನು ಚಿತ್ರಿಸಲು ಕೇವಲ ವಿವಿಧ ವರ್ಣದ ಪೆನ್ ಬಳಸಿ “ರಾಮ-ರಾಮ” ಎಂದು ನಿರಂತರವಾಗಿ ಬರೆದು ಅವರ ಅಸಾಧಾರಣ ಪ್ರತಿಭೆಯನ್ನು ಕಲಾಕೃತಿಯಲ್ಲಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.