ಮಲ್ಪೆ: ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜದ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯ ದಿನ ಬೆಳ್ಳಿಗೆ ಶ್ರೀ ರಾಮ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ರಾಮ ನಾಮ ಹವನ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ
ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ಕೆ. ಗೋಕುಲದಾಸ್ ಪೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ , ಮಾಜಿ ಶಾಸಕ ರಘುಪತಿ ಭಟ್ , ಮಾಜಿ ಸಚಿವ ಪ್ರಮೋದ್ ಮಧ್ವರಾಜ್ , ನಾರಾಯಣ ಪೈ ಮಣಿಪಾಲ, ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಮೊಕ್ತೇಸರ ಪಿ. ವಿ ಶೆಣೈ , ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅನಂತಪದ್ಮನಾಭ ಕಿಣಿ, ಪ್ರೊ. ಪವನ್ ಕಿರಣ್ ಕೆರೆ , ಶ್ರೀ ಶಂಕರ ನಾರಾಯಣ ದೇವಸ್ಥಾನದ ಅಧ್ಯಕ್ಷ ಸಾಧು ಸಾಲಿಯಾನ್ , ಆನಂದ ಸುವರ್ಣ, ನಾಗರಾಜ್ ಸುವರ್ಣ, ಗೋಪಾಲ್ ಸಿ ಬಂಗೇರ ಹಾಗೂ ಇತರ ಗಣ್ಯರು ಭಾಗವಹಿಸಲಿರುವರು.
ಅಯೋಧ್ಯೆಯ ಶ್ರೀ ರಾಮ ಮಂದಿರದ ಕರ ಸೇವಕರಿಗೆ ಸನ್ಮಾನ ನಡೆಯಲಿದೆ. ಬಳಿಕ ಆಕಾಶವಾಣಿಯ ಕಲಾವಿದ ರಾಜೇಶ್ ಪಡಿಯಾರ್ ಮೈಸೂರು, ರಂಜಿತ್ ಭಟ್ , ವಾಣಿಶ್ರೀ ಪ್ರಮೋದ್ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ದೀಪಾರಾಧನೆ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಂದಿರದ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.