ನಾಯ್ಕನಕಟ್ಟೆ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ ದಿನ ಜ.22 ರಂದು ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದಿನಪೂರ್ತಿ ರಾಮೋತ್ಸವ ಹಾಗೂ ಸಂಜೆ ದೀಪೋತ್ಸವ ನಡೆಯಲಿದೆ ಎಂದು ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ 8.30 ಕ್ಕೆ ದೇವತಾ ಪ್ರಾರ್ಥನೆ, 8.45 ರಿಂದ ಶ್ರೀ ರಾಮ ನಾಮ ತಾರಕ ಮಂತ್ರ ಹವನ,ಮಹಿಳಾ ಮಂಡಳಿಯವರಿಂದ ಶ್ರೀ ರಾಮನಾಮ ತಾರಕ ಮಂತ್ರ ಪಠಣ ,ಹನುಮಾನ್ ಚಾಲೀಸ್ ಪಠಣ, ಭಜನೆ. 12.00 ಘಂಟೆಗೆ ಹೋಮದ ಪೂರ್ಣಾಹುತಿ, 12.45 ಕ್ಕೆ ಶ್ರೀ ದೇವರಿಗೆ ಆರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಸಮಾರಾಧನೆ ನಡೆಯಲಿದೆ.
ಸಂಜೆ 5.45 ಕ್ಕೆ ಶ್ರೀ ರಾಮನ ಕುರಿತು – ಭರತನಾಟ್ಯ – ನೃತ್ಯ ವೈಭವ. 7.00 ಘಂಟೆಗೆ ಶ್ರೀ ರಾಮೋತ್ಸವದ
ಬಗ್ಗೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಇವರಿಂದ ಉಪನ್ಯಾಸ, ರಾತ್ರಿ 7.45 ಕ್ಕೆ ಶ್ರೀ ದೇವರಿಗೆ ಸರ್ವಾಲಂಕಾರ ಪೂಜೆ, ಪ್ರಸಾದ ವಿತರಣೆ ಬಳಿಕ ಭೋಜನ ವ್ಯವಸ್ಥೆ.
ದೇವಳದಲ್ಲಿ ವಿದ್ಯುತ್ ದೀಪಾಲಂಕಾರ,ಪುಷ್ಪಾಲಂಕಾರ ಹಣತೆಯಲ್ಲಿ ದೀಪ ಹಚ್ಚಿ ದೀಪ ಪ್ರಜ್ವಲನ ಇರುವುದಾಗಿ ಶ್ರೀ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಮೇಶ ಪೈ ,ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.