ಜನವರಿ ಅಂತ್ಯದೊಳಗೆ ತೆರಿಗೆ ಪಾವತಿಸಿ: ನಗರಸಭೆ ಸೂಚನೆ

ಉಡುಪಿ: ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲೀಕರು ಹಾಗೂ ಅಧಿಭೋಗದಾರರು ನಗರಸಭಾ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ, ಕೈಗಾರಿಕೆ ಹಾಗೂ ತೆರಿಗೆಯಿಂದ ವಿನಾಯಿತಿ ಇರುವ ಕಟ್ಟಡ ಹೊರತುಪಡಿಸಿ, ಉಳಿದ ಕಟ್ಟಡಗಳ ಆಸ್ತಿ ತೆರಿಗೆ, ನೀರಿನ ಕರ, ಉದ್ದಿಮೆ ಪರವಾನಿಗೆ ಬಾಕಿ ಇರುವುದು ಕಂಡುಬಂದಿದ್ದು, ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ಕರ, ಉದ್ದಿಮೆ ಪರವಾನಿಗೆ ಮತ್ತು ಎಸ್.ಡಬ್ಲ್ಯೂ.ಎಮ್ ಶುಲ್ಕವನ್ನು 2024 ರ ಜನವರಿ ಅಂತ್ಯದೊಳಗೆ ನಗರಸಭಾ ಕಚೇರಿಗೆ ಪಾವತಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.